ಪುತ್ತೂರು: ನಗರದ ಮುಕ್ರಂಪಾಡಿ ಹನುಮ ವಿಹಾರ ಮೈದಾನದಲ್ಲಿ ಕಳೆದ 15 ದಿನಗಳಿಂದ ಇಂಡಿಯನ್ ಅಮ್ಯೂಸ್ ಮೆಂಟ್ ಆಶ್ರಯದಲ್ಲಿ ಪುತ್ತೂರು ಉತ್ಸವ-2024 ಆಭೂತಪೂರ್ವ ಜನಸಂದಣಿಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದು, ಮುಂದಿನ 30 ದಿನಗಳವರೆಗೂ ಮುಂದುವರೆಯಲಿದೆ.
ವಾರಾಂತ್ಯದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಕುಟುಂಬದೊಂದಿಗೆ ಪುತ್ತೂರು ಉತ್ಸವದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದರು. ಜನಸಾಮಾನ್ಯರಂತೆ ಉತ್ಸವದಲ್ಲಿ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿ ಅಚ್ಚುಕಟ್ಟಿನ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಬಾರಿಗೆ ಡ್ಯಾನ್ಸಿಂಗ್ ಫ್ಲೈ ಸೇರಿದಂತೆ ಬ್ರೇಕ್ ಡ್ಯಾನ್ಸ್, ಜೈಂಟ್ ವ್ಹೀಲ್, ಕೊಲಂಬಸ್, ಡ್ರಾಗನ್ ಡ್ರೈವ್, ಮಿಕ್ಕಿ ಮೌಸ್, ವಾಟರ್ ಬೋಟ್ ನಂತಹ 15ಕ್ಕಿಂತಲೂ ಹೆಚ್ಚು ಆಟೋಪಕರಣ, ಸೆಲ್ಫಿ ಪಾಯಿಂಟ್, ವಿವಿಧ ಮಳಿಗೆಗಳು, ಫುಡ್ ಕೋರ್ಟ್, ಫ್ಯಾಮಿಲಿ ಗೇಮ್ಸ್, ಲಂಡನ್ ಬ್ರಿಡ್ಜ್, ಮಲೇಶ್ಯಾ ಟ್ವಿನ್ ಟವರ್, ಬುರ್ಜ್ ಅಲ್ ಅರಬ್ ಪ್ರತಿಕೃತಿ ಮುಂತಾದವುಗಳು ಉತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.