ಪ್ರಥಮ ನ್ಯೂ ಗೇಮ್ಸ್ ಮಾಡಾವು
ದ್ವಿತೀಯ ಶ್ರೀ ದುರ್ಗಾ ಕೊರ್ಬಡ್ಕ
ಬಡಗನ್ನೂರು: ಹಿರಿಯ ವಿದ್ಯಾರ್ಥಿ ಸಂಘ ಕೊಯಿಲ ಅಶೋಕ ಜನ-ಮನ ಟ್ರೋಫಿ ಸಮಾರೋಪ ಸಮಾರಂಭ ಕೊಯಿಲದ ಶಾಲಾ ಮೈದಾನದಲ್ಲಿ ನಡೆಯಿತು.
ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಅಶೋಕ ಜನ- ಮನ ಕಾರ್ಯಕ್ರಮ ಜನಮಾನಸದಲ್ಲಿ ಉಳಿಯುವಂತೆ ಮಾಡಲು ಅಶೋಕ್ ರೈ ಆಪ್ತ ವಲಯದ ಪ್ರಕಾಶ್ ರೈ ಕೊಯಿಲ ಮತ್ತು ಅವರ ತಂಡ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆದಿದೆ ಎಂದು ಆಟಗಾರಿಗೆ ಶುಭ ಹಾರೈಸಿದರು.
ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು ಅಶೋಕ ಜನ ಮನ ಜಾತ್ಯತೀತ ,ಪಕ್ಷಾತೀತ ಕಾರ್ಯಕ್ರಮವಾಗಿ ರಾಜ್ಯದಲ್ಲಿ ಒಂದು ಮಾದರಿ ಕಾರ್ಯಕ್ರಮ ಅದರ ಸವಿನೆನಪಿಗೆ ಈ ಕ್ರಿಕೆಟ್ ಪಂದ್ಯಾಟ ಆಯೋಜಿಸಿರುವುದು ತಮ್ಮೆಲ್ಲರ ಅಭಿಮಾನ ಎಂದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಕಟೀಲ್ ಲಾಜಿಸ್ಟಿಕ್ಸ್ ಮಾಲಕ ಜನಾರ್ದನ ಪೂಜಾರಿ ಕ್ರೀಡಾಪಟುಗಳು ಸಮಯದ ಮಹತ್ವ ಅರಿತು ಜವಾಬ್ದಾರಿಯಿಂದ ಆಟವಾಡಬೇಕೆಂದು ಶುಭ ಹಾರೈಸಿದರು. ಶಿಕ್ಷಕರಾದ ಗಿರೀಶ್ ಅವರು ಹಿರಿಯ ವಿದ್ಯಾರ್ಥಿಗಳು ,ಶಾಲಾಭಿವೃದ್ಧಿ ಸಮಿತಿಯೊಂದಿಗೆ ಬೆನ್ನೆಲುಬಾಗಿ ನಿಂತು ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ಇಂಡಸ್ಟ್ರೀಸ್ ಮಾಲಕ ಸದಾಶಿವ ರೈ ಕೊಯಿಲ, ಸುಧಾಕರ ಶೆಟ್ಟಿ ಮಂಗಳಾದೇವಿ ಟ್ರಾನ್ಸ್ ಪೋರ್ಟ್ ,ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗಪ್ಪ ಗೌಡ ಮೋಡಿಕೆ ,ಅಶೋಕ್ ರೈ ಚಾರಿಟೇಬಲ್ ಟ್ರಸ್ಟ್ ನ ದೀಕ್ಷಿತ್ ರೈ ಕುತ್ಯಾಳ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ರೈ ಕೊಯಿಲ ,ಉಪಾಧ್ಯಕ್ಷರಾದ ಸುಂದರ ನಾಯ್ಕ ತಲೆಂಜಿ , ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ವಂದಿಸಿ , ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣೆ:-
ನ್ಯೂ ಗೇಮ್ಸ್ ಮಾಡಾವು ತಂಡದ ಪ್ರಥಮ -ಬಹುಮಾನ ನಗದು 5555 ಹಾಗೂ ಅಶೋಕ್ ಜನಮನ ಟ್ರೋಫಿಯನ್ನು ಪಡೆದುಕೊಂಡರು
ದ್ವಿತೀಯ ಬಹುಮಾನ ನಗದು 3333 ಹಾಗೂ ಅಶೋಕ್ ಜನಮನ ಟ್ರೋಫಿಯನ್ನು ಶ್ರೀ ದುರ್ಗಾ ಕೊರ್ಬಡ್ಕ ತಂಡ ಪಡೆದುಕೊಂಡಿತು.
ಪಂದ್ಯಶ್ರೇಷ್ಠ ಬಹುಮಾನವನ್ನು ಶ್ರೀ ದುರ್ಗಾ ಕೊರ್ಬಡ್ಕ ತಂಡದ ಅಟಗಾರ ಹೇಮಂತ್ , ಉತ್ತಮ ಎಸೆತಗಾರ, ಬಹುಮಾನವನ್ನು ರಪೀಕ್ ನ್ಯೂ ಗೇಮ್ಸ್,ಮಾಡಾವು, ಉತ್ತಮ ದಾಂಡಿಗ, ಬಹುಮಾನವನ್ನು ಶ್ರೀ ದುರ್ಗಾ ಕೊರ್ಬಡ್ಕ, ತಂಡದ ಆಟಗಾರ ಸುಹಾಸ್, ಉತ್ತಮ ಕ್ಷೇತ್ರರಕ್ಷಕ, ಬಹುಮಾನವನ್ನು ನ್ಯೂ ಗೇಮ್ಸ್ ಮಾಡಾವು ತಂಡದ ಅಟಗಾರ ಹೈದರ್ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ನ್ಯೂ ಗೇಮ್ಸ್ ಮಾಡಾವು ತಂಡದ ಆಟಗಾರ ಹಾರೀಶ್ ಪಡೆದುಕೊಂಡರು.