ಪುತ್ತೂರು : ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ನವೆಂಬರ್ 23 ರಂದು 9 ಮತ್ತು 10ನೇ ತರಗತಿಗಳ ಮಕ್ಕಳಿಗಾಗಿ “ಪರೀಕ್ಷೆಯ ತಯಾರಿಗಾಗಿ ತಂತ್ರಗಳು” ಎಂಬ ವಿಷಯದ ಕುರಿತು ‘ಚೇತನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರು ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರಾದ ಡಾ. ಶ್ರೀಶ ಬೈಪದವು ಇವರು, ಪಾಠದ ವಿಷಯಗಳ ದೃಶ್ಯೀಕರಣ, ಏಕಾಗ್ರತೆ , ಮನಸ್ಸಿನ ನಕ್ಷೆ, ಜೀವನದಲ್ಲಿರಬೇಕಾದ ಗುರಿ, ಕಷ್ಟವಾಗಿರುವ ವಿಷಯಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ತರಗತಿಯಲ್ಲಿ ಪಾಠವನ್ನು ಹೇಗೆ ಕೇಳಬೇಕು? ಪರೀಕ್ಷೆಯನ್ನು ಹೇಗೆ ಎದುರಿಸಬೇಕು? ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು? ಎಂಬಿತ್ಯಾದಿ ವಿಷಯಗಳ ಕುರಿತು ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಪರೀಕ್ಷೆಯ ತಯಾರಿಗಾಗಿ ಬಳಸಬೇಕಾದ ತಂತ್ರಗಳ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸಿಂಧು ವಿ. ಜಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. 10ನೇ ತರಗತಿಯ ಶಶಾಂಕ್. ಪಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.