ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಸಾರಥ್ಯದಲ್ಲಿ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಹೈಸ್ಕೂಲ್ವರೆಗಿನ ಮಕ್ಕಳಿಗೆ ನಿಧಿ ಶೋಧ(ಟ್ರೆಶರ್ ಹಂಟ್) ಸ್ಪರ್ಧೆ, ಬಿರುಮಲೆ ಪ್ರಕೃತಿ ಬಿಡಿಸುವ ಸ್ಪರ್ಧೆ, ಹಾಡುಗಾರಿಕೆ ಸ್ಪರ್ಧೆ, ಭಾಷಣ ಸ್ಪರ್ಧೆ ಟ್ರೆಶರ್ ಹಂಟ್, ಚಿತ್ರ ಬಿಡಿಸುವುದು, ಹಾಡು, ಭಾಷಣ ಇತ್ಯಾದಿ ವಿವಿಧ ಸ್ಪರ್ಧೆಗಳು ನ.24 ರಂದು ಸಂಜೆ ಬಿರುಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ನಡೆಯಿತು.
ವಿಭಾಗವಾರು ಫಲಿತಾಂಶ:
ನಿಧಿ ಶೋಧ ಸ್ಪರ್ಧೆ(ಹೈಸ್ಕೂಲ್ ವಿಭಾಗ)-ಗೌತಮಿ(ಪ್ರ),9ನೇ ತರಗತಿ, ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ, ವರ್ಷಿಣಿ ಕೊಂಬೆಟ್ಟು(ದ್ವಿ),8ನೇ ತರಗತಿ ಸಂತ ವಿಕ್ಟರ್ಸ್ ಪುತ್ತೂರು. ಹೈಯರ್ ಪ್ರೈಮರಿ-ಸಾಯಿ ಪ್ರಗಾಮ್ ನೀರ್ಪಾಡಿ(ಪ್ರ), 6ನೇ ತರಗತಿ ಲಿಟ್ಲ್ ಫ್ಲವರ್ ಶಾಲೆ, ಜ್ಞಾನೇಶ್ ದರ್ಬೆ(ದ್ವಿ), 6ನೇ ತರಗತಿ ಬೆಥನಿ ಶಾಲೆ. ಪ್ರೈಮರಿ-ಜ್ಯೋತ್ಸ್ನಾ ಬಿರುಮಲೆ(ಪ್ರ),4ನೇ ತರಗತಿ ಅಂಬಿಕಾ ಶಾಲೆ, ವಿರಾಟ್ ಶೆಟ್ಟಿ ಬಿರುಮಲೆ(ದ್ವಿ), 4ನೇ ತರಗತಿ ಲಿಟ್ಲ್ ಫ್ಲವರ್ ಶಾಲೆ.
ಬಿರುಮಲೆ ಪ್ರಕೃತಿ ಚಿತ್ರ ಬಿಡಿಸುವ ಸ್ಪರ್ಧೆ-ಹೈಸ್ಕೂಲ್ ವಿಭಾಗ:
ಅವನಿ ಎಸ್. ವಿ.(ಪ್ರ), 8ನೇ ತರಗತಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಸನ ಫಾತಿಮಾ(ದ್ವಿ), 8ನೇ ತರಗತಿ, ಬುಶ್ರಾ ಶಾಲೆ, ಹೈಯರ್ ಪ್ರೈಮರಿ-ಯಾಕ್ಷಿತಾ(ಪ್ರ), 7ನೇ ತರಗತಿ ಲಿಟ್ಲ್ ಫ್ಲವರ್ ಶಾಲೆ, ಶ್ರಮಿಕಾ ಎಸ್.(ದ್ವಿ), 6ನೇ ತರಗತಿ ಲಿಟ್ಲ್ ಫ್ಲವರ್ ಶಾಲೆ, ಪ್ರೈಮರಿ-ಆದ್ಯ(ಪ್ರ), 3ನೇ ಲಿಟ್ಲ್ ಫ್ಲವರ್ ಶಾಲೆ, ಸಮ್ಯೂರ್(ದ್ವಿ),4ನೇ ತರಗತಿ, ಬೆಥನಿ ಶಾಲೆ
ಹಾಡುಗಾರಿಕೆ ಸ್ಪರ್ಧೆ-ಹೈಸ್ಕೂಲ್ ವಿಭಾಗ:
ಅವನಿ ಎಸ್. ವಿ(ಪ್ರ), 8ನೇ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಸಿರಿ(ದ್ವಿ), 8ನೇ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪ್ರೈಮರಿ:ಶೌರಿ(ಪ್ರ), 3ನೇ ತರಗತಿ, ವಿವೇಕಾನಂದ ಶಾಲೆ, ಶಮಿತಾ(ದ್ವಿ), 6ನೇ, ಅಂಬಿಕಾ ಶಾಲೆ, ಚಂದನ್ ಕೃಷ್ಣ(ದ್ವಿ), 5ನೇ ತರಗತಿ, ಲಿಟ್ಲ್ ಫ್ಲವರ್ ಶಾಲೆ.
ಭಾಷಣ ಸ್ಪರ್ಧೆ-ಹೈಸ್ಕೂಲ್ ವಿಭಾಗ:
ವೈಷ್ಣವಿ ಪೈ(ಪ್ರ), 10ನೇ ತರಗತಿ,ವಿವೇಕಾನಂದ ಶಾಲೆ, ಪ್ರೈಮರಿ-ಧೀಮಹಿ(ಪ್ರ), ೩ನೇ ತರಗತಿ, ರಯನ್ ಇಂಟರ್ ನ್ಯಾಷನಲ್ ಸ್ಕೂಲ್, ಇಶಾನ್ವಿ(ದ್ವಿ), ಅಂಬಿಕಾ ಯುಕೆಜಿ ಸ್ಕೂಲ್
ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಅಧ್ಯಕ್ಷ ಎ.ಜೆ ರೈ, ಸಂತೋಷ್ ಕುಮಾರ್ ಶೆಟ್ಟಿ, ಪ್ರೊ.ಝೇವಿಯರ್ ಡಿ’ಸೋಜ, ವಂದನಾ ಶರತ್, ಶರತ್ ಕುಮಾರ್ ರೈ, ಪ್ರೊ|ದತ್ತಾತ್ರೇಯ ರಾವ್, ಎಂ.ಎಸ್ ಅಮ್ಮಣ್ಣಾಯ, ನಿತಿನ್ ಪಕ್ಕಳ, ಮನೋಜ್ ಶಾಸ್ತ್ರಿ, ಶಾಂತ ಕುಮಾರ್, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಅಶ್ರಫ್ ಪಿ.ಎಂ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಂದೀಪ್ ರೈ, ಅಕ್ಷಯ ಕಾಲೇಜು ಚೇರ್ಮ್ಯಾನ್ ಜಯಂತ್ ನಡುಬೈಲು, ಜೈರಾಜ್ ಭಂಡಾರಿ ಸಹಿತ ಮಕ್ಕಳ ಪೋಷಕರು, ಸಾರ್ವಜನಿಕರು ಕಾರ್ಯಕ್ರಮ ಯಶಸ್ವಿಯಾಗಿಸುವಲ್ಲಿ ಸಹಕರಿಸಿದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಚಿತ್ರಕಲಾ ಶಿಕ್ಷಕ ಜಗನ್ನಾಥ್ ಅರಿಯಡ್ಕ, ಹಾಡುಗಾರಿಕೆಯಲ್ಲಿ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀಮತಿ ಸೌಮ್ಯ ಹೆಗಡೆರವರು ಸಹಕರಿಸಿದರು.
ಡಿ.8:ವಿಜೇತರಿಗೆ ಬಹುಮಾನ ವಿತರಣೆ..
ಬಹುಮಾನ ವಿತರಣೆಯನ್ನು ಡಿಸೆಂಬರ್ 8ರಂದು ಸಂಜೆ 4.30 ಗಂಟೆಗೆ ಬಿರುಮಲೆ ಬೆಟ್ಟದಲ್ಲಿ ನಡೆಯುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನೀಡಲಾಗುವುದು. ಭಾಗವಹಿಸಿದ 4ನೇ ತರಗತಿಯ ಕೆಳಗಿನ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ಇದೆ.
ಎಲ್ಲಾ ವಿಜೇತರು ಕಾರ್ಯಕ್ರಮಕ್ಕೆ ಆಗಮಿಸಿ ಬಹುಮಾನ ಸ್ವೀಕರಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಗವಹಿಸಿದವರು..
*ಚಿತ್ರ ಬಿಡಿಸುವ ಸ್ಪರ್ಧೆ-69 ಮಂದಿ
*ಟ್ರೆಶರ್ ಹಂಟ್-91 ಮಂದಿ
*ಹಾಡುಗಾರಿಕೆ-40ಮಂದಿ
*ಭಾಷಣ- 7 ಮಂದಿ