ಪುನರ್ವಸತಿ ಕಾರ್ಯಕರ್ತರ ಸಮಸ್ಯೆಗೆ ಧ್ವನಿಯಾಗುವಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರಿಗೆ ಮನವಿ

0

puttur: ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ವಿವಿದೋದ್ದೇಶ ಮತ್ತು ಗ್ರಾಮೀಣ,ನಗರ ಪುನರ್ವಸತಿ ಕಾರ್ಯಕರ್ತರ ಕನಿಷ್ಟ ವೇತನ ಜಾರಿ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತರುವ ಬಗ್ಗೆ  ಕಡಬ ತಾಲೂಕು ಪುನರ್ವಸತಿ ಕಾರ್ಯಕರ್ತರು ಕಡಬ ತಾಲೂಕು ಆಡಳಿತ ಸೌಧ ದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರಿಗೆ ಮನವಿ ಸಲ್ಲಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಹಲವಾರು ವರ್ಷಗಳಿಂದ  (MRW) ತಾಲೂಕು ಪಂಚಾಯತ ನಲ್ಲಿ ವಿವಿದೋಧ್ಧೇಶ ಪುನರ್ವಸತಿ ಕಾರ್ಯಕರ್ತರು, (VRW) ಗ್ರಾಮ ಪಂಚಾಯತ್‌ ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ(URW) ನಗರ ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ವಿಶೇಷಚೇತನರಿಗೆ ಸರಕಾರದಿಂದ ಸಿಗುವ ಪ್ರತಿಯೊಂದು ಮೂಲಭೂತ ಸೌಲಭ್ಯ ಯೋಜನೆಗಳನ್ನುಪ್ರತಿ ವಿಶೇಷ ಚೇತನರ ಕುಟುಂಬಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ.ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣೆ, ಸಮಾನ ಅವಕಾಶ ಮತ್ತು ಪೂರ್ಣ ಭಾಗವಹಿಸುವಿಕೆಗಾಗಿ ಭಾರತ ಸರಕಾರವು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಜಾರಿಗೆ ಬಂದಿರುತ್ತದೆ. ಇದರ ಪ್ರಕಾರ ಪಂಚಾಯತ್‌ ಗಳಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ಯನ್ನು ನಡೆಸುತ್ತಿದ್ದೇವೆ. ವಿಶೇಷ ಚೇತನರಿಗೆ ಭಾರತ ಸರಕಾರದ ವಿಶೇಷಚೇತನರ “ವಿಶಿಷ್ಟ ಗುರುತಿನ ಚೀಟಿ”(ಯುಡಿಐಡಿ)ಜಾರಿಗೆ ಬಂದಿರುತ್ತದೆ. ಇದರ ಪ್ರಕಾರ ಎಲ್ಲಾ ವಿಶೇಷ ಚೇತನರಿಗೆ ತಾಲೂಕು ಮತ್ತು ಜಿಲ್ಲಾ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುಡಿಐಡಿ ಕಾರ್ಡ ನ್ನು ಮಾಡುತ್ತಿದ್ದೇವೆ. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ದಿನದಿಂದ ದಿನಕ್ಕೆ ಬೆಲೆಯೇರಿಕೆಯ ದಿನಗಳಲ್ಲಿ ಕಡಿಮೆ ಗೌರವಧನದಿಂದಾಗಿ ಜೀವನ ನಿರ್ವಹಣೆ ಮಾಡಲು ತುಂಬಾ ಕಷ್ಟಸಾಧ್ಯವಾಗಿದೆ. ಕಡಿಮೆ ಗೌರವಧನದಿಂದಾಗಿ ಸ್ವತಂತ್ರ ಜೀವನ ನಿರ್ವಹಣೆಗೆ ಅತೀ ಕಷ್ಟಕರವಾಗಿದೆ. ನಾವು ಶಾಸನಬದ್ದ ವಿಶೇಷ ಚೇತನರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಕನಿಷ್ಟ ವೇತನವನ್ನು ಮಾಡುವಂತೆ ಬೆಳಗಾವಿಯ ಸುವರ್ಣ ಸೌಧದಲ್ಲಿ ತಾವುಗಳು ಅಧಿವೇಶನದಲ್ಲಿ ಚರ್ಚಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪೆರಾಬೆ ಗ್ರಾಮ ಪಂಚಾಯತ್‌ ನ ಮುತ್ತಪ್ಪ.ಬಿ, ಆಲಂಕಾರು ಗ್ರಾಮ ಪಂಚಾಯತ್‌ ನ ಮೋನಪ್ಪ.ಬಿ, ಬೆಳಂದೂರು ಗ್ರಾಮ ಪಂಚಾಯತ್‌ ನ ಪ್ರಶಾಂತಿ, ಕಾಣಿಯೂರು ಗ್ರಾಮ ಪಂಚಾಯತ್‌ ನ ಧನಂಜಯ, ಕೊಯಿಲ ಗ್ರಾಮ ಪಂಚಾಯತ್‌ ನ ಅತೀಕಮ್ಮ, ಮರ್ಧಾಳ ಗ್ರಾಮ ಪಂಚಾಯತ್‌ ನ ಶಾಂತಾ, ಎಡಮಂಗಲ ಗ್ರಾಮ ಪಂಚಾಯತ್‌ ನ ವಿಶ್ವನಾಥ, ಕಡಬ ಪಟ್ಟಣ ಪಂಚಾಯತ್‌ ನ ಪ್ರತಿಭಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here