ಏಸ್‌ಮೊಬೈಕ್ಸ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಗೋವನ್-350 ಬಿಡುಗಡೆ

0

ಪುತ್ತೂರು: ಯುವಕರ ನಿಮ್ಮ ನೆಚ್ಚಿನ ಮೋಟಾರ್ ಬೈಕ್ ಎಂದೇ ಹೇಳಲಾಗುತ್ತಿರುವ ರಾಯಲ್ ಎನ್‌ಫೀಲ್ಡ್‌ನ ಆಕರ್ಷಕ ವಿನ್ಯಾಸ, ಹಲವು ವಿಶಿಷ್ಟ್ಯತೆಗಳೊಂದಿಗೆ ನಿರ್ಮಾಣಗೊಂಡಿರುವ ಗೋವನ್ ಕ್ಲಾಸಿಕ್ 350 ಬೈಕ್‌ನ್ನು ರಾಯಲ್ ಎನ್‌ಫೀಲ್ಡ್‌ನ ಅಧಿಕೃತ ವಿತರಕರಾಗಿರುವ ಬೊಳುವಾರಿನ ಏಸ್ ಮೊಬೈಕ್ಸ್‌ನಲ್ಲಿ ಬಿಡುಗಡೆಗೊಂಡಿತು.

ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಹಾಗೂ ಅಶ್ವಿನಿ ಮೆಡಿಕಲ್‌ನ ಮ್ಹಾಲಕ ಗುರುದತ್ತ ನಾಯಕ್ ನೂತನ ಬೈಕ್‌ನ್ನು ಅನಾವರಣಗೊಳಿಸಿದರು. ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಕೇಕ್ ಕತ್ತರಿಸಿದರು. ಅನೂಪ್ ಹೊಸ ಬೈಕ್‌ನ ಪ್ರಥಮ ಗ್ರಾಹಕರಾಗಿದ್ದರು. ಸೆಲ್‌ಝೋನ್ ಮೊಬೈಲ್ ಶಾಪ್‌ನ ಮ್ಹಾಲಕ ಪ್ರವೀಣ್ ಅಮೈ, ಸಂತೋಷ್, ಮ್ಯೂಸಿಕ್ ವಲ್ಡ್‌ನ ಅಜಿತ್ ಕರ್ಕೇರ, ಶೋರೂಂನ ಮ್ಹಾಲಕ ಆಕಾಶ್ ಐತಾಳ್, ಸೇಲ್ಸ್ ಮ್ಯಾನೇಜರ್ ಜಯಪ್ರಕಾಶ್, ಸರ್ವಿಸ್ ಮ್ಯಾನೇಜರ್ ಧನ್‌ರಾಜ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

ವಿನ್ಯಾಸ, ವೈಶಿಷ್ಟ್ಯಗಳು:
ಈ ಹೊಸ ಬೈಕ್ ಆಕರ್ಷಕವಾದ ವಿನ್ಯಾಸ ಹೊಂದಿದ್ದು ಯುವ ಜನರನ್ನು ಆಕರ್ಷಿಸುವ ರೆಟ್ರೋ ಲುಕ್‌ನ್ನು ಹೊಂದಿದೆ. ನೂತನ ಬೈಕ್ ಉತ್ತಮವಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್ ಲ್ಯಾಂಪ್, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು, ಅಡ್ಜೆಸ್ಟೇಬಲ್ ಕ್ಲಚ್ ಹಾಗೂ ಬ್ರೇಕ್ ಲಿವರ್‌ಗಳನ್ನು ಒಳಗೊಂಡಿದೆ. ’ಟಿಯರ್ ಡ್ರಾಪ್’ ರೀತಿಯಲ್ಲಿರುವ ಇಂಧನ ಟ್ಯಾಂಕ್, ಕರ್ವ್ ಫೆಂಡರ್‌ಗಳು, ’ಏಪ್-ಹ್ಯಾಂಗರ್’ಗೆ ಹೋಲಿಕೆಯಾಗಬಲ್ಲ ಹ್ಯಾಂಡಲ್‌ಬಾರ್‌ಗಳು, ಫ್ಲೋಟಿಂಗ್ ಸೀಟ್ & ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಪಡೆದಿದೆ. ಟ್ಯೂಬ್‌ಲೆಸ್ ವೈಟ್‌ವಾಲ್ ಟೈರ್‌ನೊಂದಿಗೆ ಸ್ಪೋಕ್ಡ್ – ಫ್ರಂಟ್ ವೀಲ್ ಶಾಡ್‌ನ್ನು ಹೊಂದಿದೆ. ಜೊತೆಗೆ ಈ ಬೈಕ್, 4 ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ. ಸೆಮಿ-ಡಿಜಿಟಲ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ನೂತನ ಬೈಕ್ ‘ಕ್ಲಾಸಿಕ್’ ಮೋಟಾರ್‌ಸೈಕಲ್‌ನಂತೆ ಶಕ್ರಿಯುವವಾಗಿರುವ ಪವರ್‌ಟ್ರೇನ್ ಹೊಂದಿದೆ. ಇದು 349 ಸಿಸಿ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 6,100 ಆರ್‌ಪಿಎಂನಲ್ಲಿ 20.2 ಬಿಹೆಚ್‌ಪಿ ಅಶ್ವ ಶಕ್ತಿ ಮತ್ತು 4,000 ಆರ್‌ಪಿಎಂನಲ್ಲಿ 27 ನ್ಯೂಟನ್ ಮೀಟರ್ ಪೀಕ್ ಟಾರ್ಕ್‌ನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನು ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 36.2 ಮೈಲೇಜ್ ನೀಡುತ್ತದೆ. ಬೈಕ್‌ನ ಮುಂಭಾಗ 41 ಎಂಎಂ ಡೌನ್‌ಟ್ಯೂಬ್ ಸ್ಪೈನ್ ಫ್ರೇಮ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ 6-ಸ್ಟೆಪ್ಸ್ ಪ್ರಿಲೋಡ್ ಅಡ್ಜೆಸ್ಟೇಬಲ್ ಟ್ವಿನ್ ಶಾಕ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಇದು ರಸ್ತೆಯ ಮೇಲೆ ಸವಾರರಿಗೆ ಬಿಗಿಹಿಡಿತ ಒದಗಿಸುತ್ತದೆ.

ಸುರಕ್ಷತೆಗೂ ಹೆಸರಾಗಿರುವ ಹೊಸ ಗೋವಾನ್ ಕ್ಲಾಸಿಕ್ 350 ಮುಂದೆ 300 ಎಂಎಂ ಹಾಗೂ ಹಿಂದೆ270 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಜೊತೆಗೆ ಡುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ. 2,130 ಎಂಎಂ ಉದ್ದ, 825 ಎಂಎಂ ಅಗಲ ಮತ್ತು 1,200 ಎಂಎಂ ಎತ್ತರವಿದೆ. 1,400 ಎಂಎಂ ಉದ್ದದ ವೀಲ್‌ಬೇಸ್‌ನ್ನು ಒಳಗೊಂಡಿದೆ. ಮುಂಭಾಗ 19-ಇಂಚಿನ ವೀಲ್ ಹಾಗೂ 100/90-1 ಅಳತೆಯ ಟೈರ್‌ನ್ನು ಹೊಂದಿದೆ. ಹಿಂಭಾಗ 16-ಇಂಚಿನ ವೀಲ್ ಮತ್ತು 30/90-16 ಅಳತೆಯ ಟೈರ್‌ನ್ನು ಒಳಗೊಂಡಿದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮೊದಲಾದ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಹೊಸ ಬೈಕ್ ಶೋರೂಂನಲ್ಲಿ ಪ್ರದರ್ಶನಕ್ಕೆ ಲಭ್ಯವಿದೆ. ಬುಕ್ಕಿಂಗ್ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಶೋರೂಂ ಅಥವಾ 7022003166. 7022003169 ನಂಬರನ್ನು ಸಂಪರ್ಕಿಸಬಹುದು ಎಂದು ಶೋರೂಂನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here