ಪುತ್ತೂರು: ಅರಿಕ್ಕಿಲ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಕಾರ್ಯಾಚರಿಸುವ ದರ್ಸ್ ವಿದ್ಯಾರ್ಥಿಗಳ ಪೈಕಿ SSF ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಬುರ್ದಾ ಆಲಾಪನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಹದ್ ಹೊಸತೋಟ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕನ್ನಡ ಕಥೆ ರಚನೆಯಲ್ಲಿ ದ್ವಿತೀಯ ಸ್ಥಾನ ಪಡೆದ ಸ್ವಾದಿಕ್ ಕೊಳ್ತಿಗೆಯವರನ್ನು ನೂರುಲ್ ಹುದಾ ಮಸೀದಿಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿ ಸನ್ಮಾನಿಸಲಾಯಿತು.
ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಮುದರ್ರಿಸರಾದ ಜುನೈದ್ ಸಖಾಫಿ ಜೀರ್ಮುಕ್ಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಮಾಅತ್ ಉಪಾಧ್ಯಕ್ಷರಾದ ಎಂ ಕೆ ಮುಹಮ್ಮದ್, ಬಿಕೆ ಯೂಸುಫ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಕೆ. ಎಂ, ಅಬ್ದುರ್ರಝಾಖ್ ಎಂ ಕೆ, ಅಬ್ಬಾಸ್ ಶಾರ್ಜಾ, ಬಷೀರ್ ಮಾಸ್ಟರ್, ಮುಹಮ್ಮದ್ ಅರಿಕ್ಕಿಲ ಹಾಗೂ ಜಮಾಅತ್ತಿನ ಹಿರಿಯ ವ್ಯಕ್ತಿಗಳು ಬಾಗವಹಿಸಿದ್ದರು.
SSF ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವವು ನವೆಂಬರ್ 29, 30 ಹಾಗೂ ಡಿಸೆಂಬರ್ 01 ರಂದು ಗೋವಾದಲ್ಲಿ ನಡೆಯಲಿದ್ದು, ದರ್ಸ್ ವಿದ್ಯಾರ್ಥಿ ಸಹದ್ ಹೊಸತೋಟ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಬುರ್ದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾನೆ.