ಪುತ್ತೂರು: ಇತ್ತೀಚಗೆ ನಡೆದ ಗ್ರಾ.ಪಂ ಉಪಚುನಾವಣಾ ಫಲಿತಾಂಶದ ಬಗ್ಗೆ ಮುಖ್ಯಂತ್ರಿಗಳು ನನ್ನ ಜೊತೆ ಮಾತನಾಡಿ ಮೂರಕ್ಕೆ ಮೂರು ಗೆದ್ದಿದ್ದೇವೆ ಎಂದು ನನ್ನಲ್ಲಿ ಫಲಿತಾಂಶ ಹಂಚಿಕೊಂಡದ್ದು ನನಗೆ ಅಚ್ಚರಿ ಮೂಡಿಸಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾ.ಪಂ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ” ನಾನು ಸಿ.ಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ. ಭೇಟಿಯಾಗಿ ಮಾತುಕತೆ ನಡೆಸಿ ನಾನು ಮತ್ತು ಗೃಹ ಸಚಿವರು ಜೊತೆಯಾಗಿ ಸಿ ಎಂ ಅವರ ಜೊತೆ ಬರುತ್ತಿರುವಾಗ ʼಏಯ್ ರೈ ನಿನ್ನ ಕ್ಷೇತ್ರದಲ್ಲಿ ನಡೆದ ಗ್ರಾ.ಪಂ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರವನ್ನು ಗೆದ್ದು ಬಂದಿದ್ದೀರ ಶಹಬ್ಬಾಸ್ʼ ಎಂದು ಹೇಳಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಗ್ರಾ.ಪಂ ಚುನಾವಣಾ ಫಲಿತಾಂಶದ ಬಗ್ಗೆ ನನ್ನಲ್ಲಿ ವಿಚಾರಿಸಿದ್ದನ್ನು ಕೇಳಿ ನನಗೆ ಅಚ್ಚರಿಯಾಗಿದೆ ಎಂದ ಶಾಸಕರು ಗ್ರಾ.ಪಂ ಫಲಿತಾಂಶದ ವಿಚಾರ ಸಿ.ಎಂ ರಿಗೂ ತಲುಪಿದೆ. ಇದು ಪಕ್ಷದ ಕಾರ್ಯಕರ್ತರಿಗೆ ಸಿಗುವ ಗೌರವವಾಗಿದೆ ಎಂದು ಹೇಳಿದರು.