ಪುಣಚ: ಕೋಟಿ ಚೆನ್ನಯ ಬಿಲ್ಲವ ಸಂಘ ಪುಣಚ ಇವರ ವತಿಯಿಂದ ಡಿ.8ರಂದು ನಡೆಯಲಿರುವ ಗುರುಪೂಜೆ ಮತ್ತು ಪದಗ್ರಹಣ ಕಾರ್ಯಕ್ರಮದ ಪ್ರಯುಕ್ತ ಸ್ವಜಾತಿ ಬಾಂಧವರ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಡಿ.1ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಿತು.
ಉದ್ಯಮಿ ಜನಾರ್ಧನ ಪೂಜಾರಿ ಪಡುಮಲೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ದೈಹಿಕ ಶಿಕ್ಷಕಿ,ರಾಷ್ಟ್ರಿಯ ವೈಟ್’ಲಿಪ್ಟರ್ ಕು.ಮೋಕ್ಷಾ, ಪುಣಚ ಕೋಟಿ ಚೆನ್ನಯ ಬಿಲ್ಲವ ಸಂಘದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಮಾತನಾಡಿ ಶುಭ ಹಾರೈಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಸುಧಾಕರ ಪೂಜಾರಿ ಬಡೆಕೋಡಿ, ಸಂಘದ ಪ್ರ.ಕಾರ್ಯದರ್ಶಿ ರವೀಂದ್ರ ಪೂಜಾರಿ ದಲ್ಕಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ನಳಿನಿ ಚಂದ್ರಶೇಖರ ದಲ್ಕಾಜೆಗುತ್ತು, ದೈಹಿಕ ಶಿಕ್ಷಕ ಪ್ರಕಾಶ್ ತೊಂಡನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾರಾಯಣ ಪೂಜಾರಿ ನೀರುಮಜಲು ಗರಡಿ ತೆಂಗಿನಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಿದ್ವಿತ ಪ್ರಾರ್ಥಿಸಿದರು. ರೇಖಾ ಅಶೋಕ್ ಸ್ವಾಗತಿಸಿ, ಭವ್ಯ ಮೋಹನ ಹಿತ್ತಿಲು ವಂದಿಸಿದರು. ದಿವ್ಯ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪುಣಚ, ಕೇಪು, ಬಲ್ನಾಡು, ವಿಟ್ಲ ಮುಡ್ನೂರು ಗ್ರಾಮದ ಬಿಲ್ಲವ ಸ್ವಜಾತಿ ಬಾಂಧವರ ಅಂಗನವಾಡಿ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ಆರಂಭಗೊಂಡಿತು.