ಪಾಣಾಜೆ: ಇಲ್ಲಿನ ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ, ಹುಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಕ್ಷೇತ್ರದಲ್ಲಿ ನಿತ್ಯ ಕರಸೇವೆ ನಡೆಯುತ್ತಿದೆ. ಡಿ.1 ರಂದು ಒಳಾಂಗಣದ ಪ್ರಾಂಗಣಕ್ಕೆ ಕಾಂಕ್ರೀಟ್ ಹಾಕುವ ಕೆಲಸವನ್ನು ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಮತ್ತು ಕೇಸರಿ ಮಿತ್ರವೃಂದ ಕೇಸರಿ ನಗರ ಮಿತ್ತಡ್ಕ ಇದರ ಸದಸ್ಯರು ಕರಸೇವೆಯ ಮೂಲಕ ನಡೆಸಿಕೊಟ್ಟರು.
ಕರಸೇವೆಗೆ ಪಾಲ್ಗೊಂಡವರಿಗೆ ಉಪಹಾರವನ್ನು ಅನಂತ ಪದ್ಮನಾಭ ರೈ ಕೊಂದಲಡ್ಕ, ಸಿಹಿತಿಂಡಿಯನ್ನು ಕೆಎಂಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಹಾಗೂ ರಮೇಶ್ ಭಟ್ ಬೊಳ್ಳುಕಲ್ಲು ಸಹಕರಿಸಿದರು.
ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಲಕ್ಣ್ಮೀನಾರಾಯಣ ರೈ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ನಾಯ್ಕ್ ಸುಡುಕುಳಿ, ಕಾರ್ಯದರ್ಶಿ ವಿಶ್ವನಾಥ ಪೈ ಕೊಂದಲ್ಕಾನ, ರಮಾನಾಥ ರೈ ಪಡ್ಯಂಬೆಟ್ಟು, ಪದಾಧಿಕಾರಿಗಳು ಉಪಸ್ಥಿತರಿದ್ದರು.