ಅಧ್ಯಕ್ಷರಾಗಿ- ಪ್ರಸಾದ್ ರೈ ಅಂಕೋತ್ತಿಮಾರು, ಪ್ರಧಾನ ಕಾರ್ಯದರ್ಶಿಯಾಗಿ -ಕುಂಞ ಅಮ್ಚಿನಡ್ಕ
ಕಾವು: ಭಾರತೀಯ ಜನತಾ ಪಕ್ಷ ಕಾವು-ಮಾಡ್ನೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 203 ಅಮ್ಚಿನಡ್ಕ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆ ಡಿ.2ರಂದು ಅಮ್ಚಿನಡ್ಕ ಬಾಬುರವರ ಮನೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪ್ರಸಾದ್ ರೈ ಅಂಕೋತ್ತಿಮಾರು ,ಪ್ರಧಾನ ಕಾರ್ಯದರ್ಶಿಯಾಗಿ ಕುಂಞ ಅಮ್ಚಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರನ್ನಾಗಿ ಉಮೇಶ ಎ, ಪ್ರವೀಣ್ ಎ ಬಿ,ಅಂಬಿಕಾ ಕೆ,ಹೇಮಾವತಿ, ಗೀತಾ,ರೂಪಶ್ರೀ, ಹರೀಶ್ ಆಚಾರ್ಯ ಮಳಿ,ರವಿ ಎ ಅಮ್ಚಿನಡ್ಕ,ಪ್ರಕಾಶ್ ಟಾಪ್ಪಲು ಕಟ್ಟೆ ,ವಿನೋದ್ ಎ ಅಮ್ಚಿನಡ್ಕ ಇವರುಗಳನ್ನು ಆಯ್ಕೆ ನಡೆಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನರಿಮೊಗರು ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸತೀಶ್ ಪಾಂಬರು ನಡೆಸಿಕೊಟ್ಟು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು. ನೆಟ್ಟಣಿಗೆ ಮುಡ್ನೂರು ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ತಾಲೂಕು ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಿತ್ರಾ ರೈ ಅಂಕೋತ್ತಿಮಾರು, ತಾಲೂಕು ಎ.ಸಿ ಮೋರ್ಚಾದ ಅಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕ ನಾರಾಯಣ ಆಚಾರ್ಯ ಮಳಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಬಿಜೆಪಿ ಕಾವು- ಮಾಡ್ನೂರು ಶಕ್ತಿ ಕೇಂದ್ರ ಅಮ್ಚಿನಡ್ಕ ಬೂತ್ 203 ರ ನೂತನ ಪದಾಧಿಕಾರಿಗಳ ಆಯ್ಕೆ