ಉಪ್ಪಿನಂಗಡಿ: ಬಿಜೆಪಿಯ ಉಪ್ಪಿನಂಗಡಿ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 40ರ ಬೂತ್ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ನೆಡ್ಚಿಲು ಹಾಗೂ ಕಾರ್ಯದರ್ಶಿಯಾಗಿ ವನಿತಾ ಯತೀಶ್ ಆರ್ತಿಲ ಆಯ್ಕೆಯಾಗಿದ್ದಾರೆ.
ಸಮಿತಿಯ ವಿವಿಧ ಜವಾಬ್ದಾರಿ ಸ್ಥಾನಗಳಿಗೆ ಹರೀಶ್ ಪಟ್ಲ, ಪ್ರಶಾಂತ್ ಪೆರಿಯಡ್ಕ, ರಾಜೇಶ್ ಕೊಡಂಗೆ, ಲೊಕೇಶ್, ಗೀತಾ ಆರ್ತಿಲ, ಲತಾ ರಂಗಾಜೆ, ನವೀನ್ ಕುಮಾರ್ ಕಲ್ಯಾಟೆ, ಸುಜೀತ್ ಬೊಳ್ಳಾವು, ಚಂದ್ರಶೇಖರ, ಸತೀಶ್ ನೆಡ್ಚಿಲು ಅವರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಈ ಸಂದರ್ಭ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು, ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಬಂಡಾರಿ, ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಚಿದಾನಂದ ಪಂಚೇರು ಪ್ರಮುಖರಾದ ಧರ್ನಪ್ಪ ನಾಯ್ಕ, ಯಾದವ ಆರ್ತಿಲ, ಹರಿಪ್ರಸಾದ್ ಶೆಟ್ಟಿ, ಲೊಕೇಶ ನೆಕ್ಕರೆ ಮತ್ತಿತರರು ಉಪಸ್ಥಿತರಿದ್ದರು.
