ಉಪ್ಪಿನಂಗಡಿ ಗ್ರಾಮ ಒಕ್ಕೂಟದ ಮಾದರಿ ದಂಪತಿಗಳಿಗೆ ಸನ್ಮಾನ ಸಮಾರಂಭ
ಉಪ್ಪಿನಂಗಡಿ: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವಸಹಾಯ ಸಂಘದಲ್ಲಿರುವ ಎಲ್ಲಾ ಗ್ರಾಮಗಳಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಯುಕ್ತ ಉಪ್ಪಿನಂಗಡಿ ಗ್ರಾಮ ಒಕ್ಕೂಟದ ಐದು ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನೆಕ್ಕರೆ ತಿಮ್ಮಪ್ಪ ಗೌಡರ ಮನೆಯಲ್ಲಿ ನ.29ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಉದಯ ಗೌಡ ಅತ್ರಮಜಲು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿವಿ ಮನೋಹರ್, ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಗೌಡ ಪಟೇಲ್, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಉಪ್ಪಿನಂಗಡಿ ಇದರ ವಲಯ ಅಧ್ಯಕ್ಷರಾದ ಗಂಗಯ್ಯ ಗೌಡ ಕನ್ನಡಾರು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಹಿರಿಯರಾದ ತಿಮ್ಮಪ್ಪ ಗೌಡ ನೆಕ್ಕರೆ,ರಾಮಣ್ಣ ಗೌಡ ನೆಕ್ಕರೆ, ಬಾಬು ಗೌಡ ಪಂಚೇರು,ಯುವ ಘಟಕದ ಅಧ್ಯಕ್ಷರಾದ ರೋಹಿತ್ ಕುಂಠಿನಿ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷರಾದ ಉದಯ ಆತ್ರಮಜಲು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ,ಒಕ್ಕೂಟ ಕಾರ್ಯದರ್ಶಿ ರೋಹಿಣಿ ಪೆರಿಯಡ್ಕ ವಂದಿಸಿದರು. ಟ್ರಸ್ಟ್ ಮೇಲ್ವಿಚಾರಕರಾದ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಉಪ್ಪಿನಂಗಡಿ ಗ್ರಾಮದ ಐದು ಮಾದರಿ ದಂಪತಿಗಳಿಗೆ ಸನ್ಮಾನ
ಉಪ್ಪಿನಂಗಡಿ ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಾದ ಲಕ್ಷ್ಮಿ ಕೃಷ್ಣಪ್ಪ ಗೌಡ ಅರ್ತಿಲ ಮನೆ, ಮೋನಕ್ಕ ತಿಮ್ಮಪ್ಪ ಗೌಡ ನೆಕ್ಕರೆ ಮನೆ, ಶೇಷಮ್ಮ ಸಾಂತಪ್ಪ ಗೌಡ ಬೊಲ್ಲವು ಮನೆ,ಪೊನ್ನಕ್ಕ ತಿಮ್ಮಪ್ಪ ಗೌಡ ರಂಗಾಜೆ ಮನೆ,ಸುಶೀಲಾ ರಾಮಣ್ಣ ಗೌಡ ಕುಂಠಿನಿ ಮನೆ ಇವರುಗಳನ್ನು ಶಾಲು ಹೊದಿಸಿ ಹಾರ,ಪೇಟ ತೊಡಿಸಿ ,ಸ್ಮ್ರರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.