ಬೆಟ್ಟಂಪಾಡಿ ಮತ್ತು ಇರ್ದೆ ಗ್ರಾಮ ಒಕ್ಕೂಟದ ಮಾದರಿ ದಂಪತಿಗಳಿಗೆ ಸನ್ಮಾನ
ಬೆಟ್ಟಂಪಾಡಿ: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ 50 ವರ್ಷ ದಾಂಪತ್ಯ. ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಟ್ಟಂಪಾಡಿ ಮತ್ತು ಇರ್ದೆ ಗ್ರಾಮ ಒಕ್ಕೂಟದ 6 ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಗುಮ್ಮಟೆ ಗದ್ದೆ ಕೊರಗಪ್ಪ ಗೌಡ ಇವರ ಮನೆಯಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸೇಸಮ್ಮಕೊರಗಪ್ಪ ಗೌಡ ಗುಮ್ಮಟೆಗದ್ದೆ ,ಕಮಲ ಮತ್ತು ಸುಬ್ಬಣ್ಣ ಗೌಡ ಪಾರಮನೆ, ಬೆಟ್ಟಂಪಾಡಿ ಲಲಿತಾ ಸೋಮಪ್ಪ ಗೌಡ ಗುಮ್ಮಟಿಗದ್ದೆ , ದೇವಕ್ಕಿ ಮತ್ತು ಜತ್ತಪ್ಪ ಗೌಡ ಬಾಳೆಹಿತ್ಲ್ ಇರ್ದೆ, ಹೊನ್ನಮ್ಮ ಐತ್ತಪ್ಪ ಗೌಡ ಕೋನಡ್ಕ ನಿಡ್ಪಳ್ಳಿ , ಗಿರಿಜಾ ಮತ್ತು ನಾರ್ಣಪ್ಪ ಗೌದ ಬಬ್ಲಿ ಗುಮ್ಮಟಗದ್ದೆ ದಂಪತಿಗಳನ್ನು ಶಾಲು ಹೊದಿಸಿ, ಪೇಟ ತೊಡಿಸಿ ಹಾರ ಹಾಕಿ,ಸ್ಮರಣಿಕೆ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸುಬ್ಬಣ್ಣ ಗೌಡ ಪಾರ, ಕಾರ್ಯದರ್ಶಿ ಸರೋಜ,ಶಿಕ್ಷಕರಾದ ಸೀತಾರಾಮ ಗೌಡ ಹಾಗು ಇರ್ದೆ ಬೆಟ್ಟಂಪಾಡಿ ಒಕ್ಕೂಟದ ಅಧ್ಯಕ್ಷ ಪೂವಪ್ಪ ಗೌಡ ಗುಮ್ಮಟೆಗದ್ದೆ ,ಕಾರ್ಯದರ್ಶಿ ಶುಭ ಬೈಲಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೇರಕಿಯಾದ ಪುಷ್ಪಾವತಿ ಸ್ವಾಗತಿಸಿದರು. ಮೇಲ್ವಿಚಾರಕಿಯಾದ ಸುಮಲತ ಕಾರ್ಯಕ್ರಮ ನಿರೂಪಿಸಿದರು. ಸರೋಜಸೀತಾರಾಮಗೌಡ ಧನ್ಯವಾದ ಸಮರ್ಪಣೆ ನೆರವೇರಿಸಿದರು.