ವಿದುಷಿ ಡಾ. ಪವಿತ್ರ ರೂಪೇಶ್‌ರವರ ಶಿಷ್ಯೆಯರಾದ ವಿದುಷಿ ರೂಪಶ್ರೀ ಶ್ರವಣ್, ಶ್ರೀಲತಾ ರಾಮ್‌ದಾಸ್ ರವರಿಗೆ ಡಾಕ್ಟರೇಟ್

0

ಪುತ್ತೂರು: ಡಾ.ಚಂದ್ರಿಕಾ ಡಿ.ಆರ್, ಡಾ.ಜೆ.ಎಂ ಪ್ರಹಲ್ಲಾದ ಹಾಗೂ ವಿದುಷಿ ಡಾ. ಪವಿತ್ರ ರೂಪೇಶ್ ಅವರ ಮಾರ್ಗದರ್ಶನದಲ್ಲಿ ವಿದುಷಿ ರೂಪಶ್ರೀ ಶ್ರವಣ್ ಹಾಗೂ ಶ್ರೀಲತಾ ರಾಮ್‌ದಾಸ್‌ರವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿ.ಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ. ವಿದುಷಿ ರೂಪಶ್ರೀ ಶ್ರವಣ್ ಅವರು ’ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಣೇಶ – ಒಂದು ಅಧ್ಯಯನ’ ಮಹಾ ಪ್ರಬಂಧ ಹಾಗೂ ಶ್ರೀಲತಾ ರಾಮ್‌ದಾಸ್ ಅವರು ’ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮಾಧ್ಯಮಗಳು’ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಯೋಗ ಸಂಸ್ಕೃತಂ ಯೂನಿವರ್ಸಿಟಿ ಫ್ಲೋರಿಡಾ ಯುಎಸ್‌ಎ ಯಿಂದ ಡಾಕ್ಟರೇಟ್ (PhD in music) ಪದವಿಯನ್ನು ಪಡೆದು ಪೇಜಾವರ ಶ್ರೀ ವಿಶ್ವಪ್ರಸನ್ನ ಸಾಮೀಜಿಯವರಿಂದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಮಾಣ ಪತ್ರವನ್ನು ಸೀಕರಿಸಿರುತ್ತಾರೆ.

ವಿದುಷಿ ಡಾ.ರೂಪಶ್ರೀ ಶ್ರವಣ್ ಅವರು ಬನೇರಿ ರಮೇಶ ಕಣ್ಣಾರಾಯ ಹಾಗೂ ರಾಜೇಶ್ವರಿ ರಮೇಶ್ ಕಣ್ಣಾರಾಯರವರ ಪುತ್ರಿ. ಶ್ರವಣ್ ಕುಮಾರ್ ಕೊಳಂಬೆಯವರ ಪತ್ನಿ ಹಾಗೂ ದಿ. ಪ್ರಭಾಕರ ಕೊಳಂಬೆ ಮತ್ತು ರಾಜೇಶ್ವರಿ ಪ್ರಭಾಕರ ಅವರ ಸೊಸೆ.
ಡಾ.ಶ್ರೀಲತಾ ರಾಮ್‌ದಾಸ್ ಅವರು ರಾಮ್‌ದಾಸ್ ಅವರ ಪತ್ನಿ, ಹೊಸಬೆಟ್ಟು ವೆಂಕಟಗಿರಿ ಆಚಾರ್ ಅವರ ಸೊಸೆ ಹಾಗೂ ಪಲ್ಲಿಪಾಡಿ ರಾಮಚಂದ್ರ ತುಂಗಾ ಚಂದ್ರಮತಿ ಅವರ ಪುತ್ರಿ. ಇವರು ಕೆನರಾ ಹಿರಿಯ ಆಂ.ಮಾ ಶಾಲೆ ಡೊಂಗರಕೇರಿಯಲ್ಲಿ ಸಂಗೀತ ಶಿಕ್ಷಕಿ ಹಾಗೂ ಶ್ರೀ ಹಯವದನ ಸಂಗೀತ ಕಲಾಕೇಂದ್ರ ಹೊಸಬೆಟ್ಟು ಇದರ ನಿರ್ದೇಶಕಿ.

LEAVE A REPLY

Please enter your comment!
Please enter your name here