ಉಪ್ಪಿನಂಗಡಿ: 35ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ 34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಭೋಜನ ಶಾಲೆಗೆ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭ ಶ್ರೀ ಗುರು ರಾಘವೇಂದ್ರ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಉದಯ ಕುಮಾರ್, ಕಾರ್ಯದರ್ಶಿ ಗೋಪಾಲ ಹೆಗ್ಡೆ, ಸಮಿತಿಯ ಕೆ. ಹರೀಶ್ ಉಪಾಧ್ಯಾಯ, ದಮಯಂತಿ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಶಿವಾಜಿನಗರ, ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಜೊತೆ ಕಾರ್ಯದರ್ಶಿ ಗೌತಮ್, ಗೌರವ ಸಲಹೆಗಾರರಾದ ಸದಾನಂದ ನೆಕ್ಕಿಲಾಡಿ, ಸದಸ್ಯರಾದ ನಿತೀಶ್ ಗಾಣಿಗ, ಗಿರೀಶ್, ಮಲ್ಲೇಶ್ ಕುಂದರ್, ವೈಶಾಲಿ ಮಹೇಶ್, ಕುಮಾರಿ ಮೋಹಿತ, ಸ್ವರ್ಣಲತಾ ಮತ್ತಿತರರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು 34 ನೆಕ್ಕಿಲಾಡಿ: ಶ್ರೀ ಗುರುರಾಘವೇಂದ್ರ ಮಠ ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ಗ್ರೈಂಡರ್ ಕೊಡುಗೆ