ವಿಟ್ಲ: ಕಾರು ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಮಾಣಿ ಗಡಿಸ್ಥಳದಲ್ಲಿ ನಡೆದಿದೆ.
ಮಾಣಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಕೊಡಾಜೆ ಕಡೆಯಿಂದ ಮಾಣಿ ಮಠಕ್ಕೆ ತೆರಳುತ್ತಿದ್ದ ಕಾರು, ಮಾಣಿ ಗಡಿಸ್ಥಳದಲ್ಲಿ ಡಿಕ್ಕಿಯಾಗಿದೆ.
ದ್ವಿಚಕ್ರ ವಾಹನದಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಸಣ್ಣ ಮಕ್ಕಳಿದ್ದು, ಈ ಪೈಕಿ ಒಂದು ಮಗುವಿಗೆ ಹಾಗೂ ಓರ್ವ ಮಹಿಳೆಗೆ ಗಾಯವಾಗಿದೆ. ಘಟನೆಯಿಂದಾಗಿ ರಸ್ತೆ ಬ್ಲಾಕ್ ಆಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.