ಮಾಣಿ ಕರ್ನಾಟಕ ಆಂಗ್ಲ ಮಾಧ್ಯಮ, ಕರ್ನಾಟಕ ಪ್ರೌಢಶಾಲೆಯಲ್ಲಿ‌ ವಾರ್ಷಿಕ ಕ್ರೀಡಾಕೂಟ

0

ವಿಟ್ಲ: ಕರ್ನಾಟಕ ಆಂಗ್ಲ ಮಾಧ್ಯಮ ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿ ಇದರ ಜಂಟಿ ಆಶ್ರಯದಲ್ಲಿ ಶಾಲಾ ವಾರ್ಷಿಕ ಕ್ರೀಡಾಕೂಟ ನಡೆಯಿತು.


ಗೋಳ್ತಮಜಲು ಜೇಮ್ ಪಬ್ಲಿಕ್ ಶಾಲೆಯ ಸಂಚಾಲಕರಾದ ಅಹ್ಮದ್ ಮುಸ್ತಫರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ರೋ| ಕಿರಣ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಶಾಲಾ ಉಪಾಧ್ಯಕ್ಷರಾದ ಕೆ ಮಹಮ್ಮದ್ ಹಬೀಬ್, ಸಂಚಾಲಕರಾದ ಹಾಜಿ ಇಬ್ರಾಹಿಂ , ಆಡಳಿತ ಮಂಡಳಿ ಸದಸ್ಯರುಗಳಾದ ಬಾಲಕೃಷ್ಣ ಆಳ್ವ ಕೊಡಾಜೆ , ಜಯರಾಮ ಕೆ., ಮುಖ್ಯೋಪಾಧ್ಯಾಯರುಗಳಾದ ಚೆನ್ನಪ್ಪ ಗೌಡ ಮತ್ತು ಸಾರಿಕ ಹಾಗೂ ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಮಾಣಿ ರವರು ಉಪಸ್ಥಿತರಿದ್ದರು. ಆಂಗ್ಲ ಮಾಧ್ಯಮ ಶಾಲಾ ಸಹ ಶಿಕ್ಷಕಿ ಸವಿತಾ.ಕೆ. ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಚೆನ್ನಪ್ಪ ಗೌಡ ಸ್ವಾಗತಿಸಿ , ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ಸಾರಿಕಾರವರು ವಂದಿಸಿದರು.

LEAVE A REPLY

Please enter your comment!
Please enter your name here