ಡಿ.9: ಉಪ್ಪಿನಂಗಡಿ ಸಿಟಿ ಸೆಂಟರ್ ಕಲೆಕ್ಷನ್‌ನ 5ನೇ ವಾರ್ಷಿಕೋತ್ಸವ, ಕೂಪನ್ ಬಿಡುಗಡೆ ಸಮಾರಂಭ

0

ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಸಿಟಿ ಸೆಂಟರ್ ಕಲೆಕ್ಷನ್‌ನ ಇದರ ೫ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕೂಪನ್ ಬಿಡುಗಡೆ ಸಮಾರಂಭವು ಡಿ.9 ರಂದು ಜರಗಲಿದೆ.
ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಎನ್.ರವರು ವಹಿಸಿಕೊಳ್ಳಲಿದ್ದಾರೆ. ಉಪ್ಪಿನಂಗಡಿ ಅಡಿಕೆ ವ್ಯಾಪಾರಸ್ಥರಾದ ಯು.ರಾಮರವರು ಕೂಪನ್ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಅಬ್ದುಲ್ ರಹಿಮಾನ್, ಉಪ್ಪಿನಂಗಡಿ ವಾಣಿಜ್ಯ ವರ್ತಕರ ಸಂಘದ ಉಪಾಧ್ಯಕ್ಷ ಶಬ್ಬೀರ್ ಕೆಂಪಿ, ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಇದರ ಪ್ರಾಂಶುಪಾಲ ಶಂಶದ್ ಬೇಗಂ, ಆತೂರು ಜಪಾನ್ ಟ್ರಾನ್ಸ್‌ಪೋರ್ಟ್‌ನ ಹಾಜಿ ಝಕರಿಯಾ, ವಳಾಲು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಪುಷ್ಪಲತಾ ಎಂ, ಪುತ್ತೂರು ಎಂ.ಜಿ ಟ್ರಸ್ಟ್‌ನ ಅಬ್ದುಲ್ ರಝಾಕ್ ಎಂ.ಜಿರವರು ಭಾಗವಹಿಸಲಿದ್ದಾರೆ.


ಕೂಪನ್ ದೊರೆಯುವ ಮಳಿಗೆಗಳು:
ಉಪ್ಪಿನಂಗಡಿಯಲ್ಲಿ ಹಳೆ ಬಸ್ಸು ನಿಲ್ದಾಣದ ಬಳಿಯ ಸಿಟಿ ಸೆಂಟರ್, ಪ್ರಥ್ವಿ ಕಾಂಪ್ಲೆಕ್ಸ್‌ನಲ್ಲಿನ ಹಾಗೂ ಬಿ.ಸಿ ರೋಡ್ ಕೈಕಂಬದ ಬಿಎಚ್‌ಬಿ ಸ್ಟೋರ್ ಎದುರುಗಡೆಯ ಕಮ್ಮಿದಂಗಡಿ ಕಮ್ಮಿರೇಟ್, ಪುತ್ತೂರಿನ ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿನ ನಯಾ ಚಪ್ಪಲ್ ಬಜಾರ್, ದರ್ಬೆ ರೇಗೊ ಬಿಲ್ಡಿಂಗ್‌ನಲ್ಲಿನ ಕಮ್ಮಿದಂಗಡಿ ಕಮ್ಮಿರೇಟ್, ಮುಖ್ಯರಸ್ತೆಯ ನೇಮಿರಾಜ್ ಬಿಲ್ಡಿಂಗ್‌ನ ಸ್ಟೆಪ್ಸ್ ಫೂಟ್‌ವೇರ್, ಹಳೆ ಸಂಜೀವ ಶೆಟ್ಟಿ ಎದುರುಗಡೆಯ ಬ್ರೈಡಲ್ ಗಿಫ್ಟ್ ಆಂಡ್ ಫ್ಯಾನ್ಸಿ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರುಗಡೆಯ ನ್ಯೂ ಮೊಬೈಲ್ ಟ್ರ್ಯಾಕ್, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರುಗಡೆಯ ಮದರ್ ಇಂಡಿಯಾ ಕಲೆಕ್ಷನ್, ಎಸ್‌ಎಲ್‌ವಿ ದೇವಸ್ಥಾನದ ಚೆಟ್ಟಿಯಾರ್ ಬಿಲ್ಡಿಂಗ್‌ನಲ್ಲಿನ ಕಮ್ಮಿದಂಗಡಿ ಕಮ್ಮಿರೇಟ್, ದರ್ಬೆ ರಾಜೇಶ್ ಪವರ್ ಪ್ರೆಸ್ ಎದುರುಗಡೆಯ ವೈಟ್ ಶೂ ಇಲ್ಲಿನ ಮಳಿಗೆಗಳಲ್ಲಿ ಗ್ರಾಹಕರಿಗೆ ಕೂಪನ್ ದೊರೆಯುತ್ತದೆ ಎಂದು ಮಳಿಗೆಯ ಪಾಲುದಾರರಾದ ಹಮೀದ್ ಎಂ.ಜಿ, ಮಕ್ಸೂದ್ ಎಂ.ಕೆ ಉಪ್ಪಿನಂಗಡಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೂ.5೦೦ರ ಖರೀದಿಗೆ ಒಂದು ಕೂಪನ್..
ಪಾದಾರ್ಪಣೆ ಸಂಭ್ರಮದ ಪ್ರಯುಕ್ತ ಸಂಸ್ಥೆಯು ಸೂಚಿಸಿದ ಮಳಿಗೆಗಳಿಗೆ ಭೇಟಿ ನೀಡಿ, ಆ ಮಳಿಗೆಗಳಲ್ಲಿ ವಸ್ತುಗಳನ್ನು ರೂ.5೦೦ರ ಮೇಲ್ಪಟ್ಟು ಖರೀದಿ ಮಾಡುವ ಗ್ರಾಹಕರಿಗೆ ವಿಶೇಷ ಕೂಪನ್ ಲಭ್ಯವಾಗಲಿದೆ. ಸಿಟಿ ಸೆಂಟರ್ ಕಲೆಕ್ಷನ್ ಮಳಿಗೆಯು ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ರೆಫ್ರಿಜರೇಟರ್, ದ್ವಿತೀಯ ಬಹುಮಾನವಾಗಿ ವಾಷಿಂಗ್ ಮೆಷಿನ್, ತೃತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್, ಚತುರ್ಥ ಬಹುಮಾನವಾಗಿ ಮಿಕ್ಸಿ, ಪಂಚಮ ಬಹುಮಾನವಾಗಿ ಚೈನಾ ಪಾಟ್(3) ಜೊತೆಗೆ 51 ಆಕರ್ಷಕ ಬಹುಮಾನಗಳನ್ನು ಭರ್ಜರಿಯಾಗಿ ಘೋಷಿಸಿದೆ. ವಿಜೇತರಿಗೆ 2025 ರ ಫೆ.19ರಂದು ಸಂಜೆ ಬಹುಮಾನಗಳನ್ನು ನೀಡಲಾಗುತ್ತದೆ.

LEAVE A REPLY

Please enter your comment!
Please enter your name here