ಅಧ್ಯಕ್ಷ :ಅರುಣಾ ರೈ ಬಿಜಳ ಕಾರ್ಯದರ್ಶಿ: ಸಂಜೀವ ಬೊಳ್ಳಾಡಿ
ಪುತ್ತೂರು:ಭಾರತೀಯ ಜನತಾ ಪಾರ್ಟಿ ಪುತ್ತೂರು ಒಳಮೊಗ್ರು ಶಕ್ತಿಕೇಂದ್ರದ 161ನೇ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆಯು ಎಸ್ ಸುಂದರಿ ರೈ ಕುಂಬ್ರ ಇವರ ಮನೆಯಲ್ಲಿ ನಡೆಯಿತು.
ನೂತನ ಅದ್ಯಕ್ಷರಾಗಿ ಅರುಣಾ ರೈ ಬಿಜಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಬೊಳ್ಳಾಡಿ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿ ಸದಸ್ಯರನ್ನಾಗಿ ಕರುಣಾ ರೈ ಬಿಜಳ, ಸುಧಾಕರ ರೈ ಕುಂಬ್ರ, ಮೋನಪ್ಪ ಪೂಜಾರಿ ಬಡಕ್ಕೋಡಿ, ಶ್ರೀಮತಿ ಸುನೀತ ಕುಂಬ್ರ, ಶೋಭಾ ಕೊಯ್ಲತ್ತಡ್ಕ, ಉಮೇಶ್ ಪೂಜಾರಿ ಬಡಕ್ಕೊಡಿ, ಕೃಷ್ಣ ನಾಯ್ಕ ಶೇಖಮಲೆ, ಬಾಲಕೃಷ್ಣ ನಾಯ್ಕ, ಶೇಖಮಲೆ, ಚೈತ್ರ ಕುಂಬ್ರ, ಸುಶೀಲ ರೈ ಕುಂಬ್ರ ಇವರುಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸದಸ್ಯತ್ವ ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ನಿತೀಶ್ ಕುಮಾರ್ ಶಾಂತಿವನ, ನೆ.ಮುಡ್ನೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಚಲನ ಚಿತ್ರನಟ ಸುಂದರ ರೈ ಮಂದಾರ ಕುಂಬ್ರ, ಹಾಗೂ ಒಳಮೊಗ್ರು ಶಕ್ತಿಕೇಂದ್ರದ ಅಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರ ಇವರು ನಡೆಸಿಕೊಟ್ಟರು. ಕರುಣಾ ರೈ ಬಿಜಳ ಸ್ವಾಗತಿಸಿ ,ರೇವತಿ ರೈ ಕುಂಬ್ರ ವಂದಿಸಿದರು.