ಪುತ್ತೂರು : ಭಗವದ್ಗೀತೆ ಅಭಿಯಾನ ಮತ್ತು ಗೀತಾ ಜಯಂತಿಯ ಅಂಗವಾಗಿ, ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ, ದ. ಕ., ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ ಮತ್ತು ಮಂಗಳೂರು ಸಂಸ್ಕೃತ ಸಂಘ ಇವರ ಆಶ್ರಯದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ “ಭಗವದ್ಗೀತೆಯಿಂದ ದೇಶದ ಸಮಗ್ರತೆ ” ಎಂಬ ವಿಷಯದಲ್ಲಿ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ 8ನೇ ತರಗತಿಯ ವಿದ್ಯಾರ್ಥಿನಿ ಧನ್ವಿ ಸುಧೀರ್ ಇವರು ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಈಕೆ ಸರ್ವೆ ತೌಡಿಂಜ ನಿವಾಸಿ ಸುಧೀರ್ ಕೃಷ್ಣ ಪಡ್ಡಿಲ್ಲಾಯ ಮತ್ತು ಸುಷ್ಮಾ ಕೆ. ಎಸ್ ದಂಪತಿಗಳ ಪುತ್ರಿ. ರಾಜ್ಯ ಮಟ್ಟದ ಸ್ಪರ್ಧೆಯು ಬಿಜಾಪುರದಲ್ಲಿ ಡಿ. 13 ಮತ್ತು 14ರಂದು ನಡೆಯಲಿದೆ. ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ 7ನೇ ತರಗತಿಯ ಯಶ್ವಿ ಪಿ ಇವರು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರಿಗೆ ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ ಇವರ ಮಾರ್ಗದರ್ಶನದಲ್ಲಿ ಸಹ ಮುಖ್ಯೋಪಾಧ್ಯಾಯಿನಿ ಶ್ರೀಲಕ್ಷ್ಮೀ ಮೊಳೆಯಾರ್ ಇವರು ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.