ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರವಿಪ್ರಕಾಶ್ ವಿಟ್ಲರವರು ಡಿ.9ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು,,ಉಪಾಧ್ಯಕ್ಷರಾದ ಸಂಗೀತ ಪಣೆಮಜಲು, ಮುಖ್ಯಾಧಿಕಾರಿ ಕರುಣಾಕರ ವಿ., ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ಜಯಂತ, ಹರೀಶ್ ಸಿ.ಹೆಚ್, ಸುನಿತಾ ಪೂಜಾರಿ, ವಿಜಯಲಕ್ಷ್ಮಿ, ಹಿರಿಯ ಬಿಜೆಪಿ ನಾಯಕರಾದ ನಿತ್ಯಾನಂದ ನಾಯಕ್, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ದ.ಕ.ಜಿಲ್ಲಾ ರಾಜ್ಯ ಚುನಾವಣಾ ಪ್ರಭಾರಿ ಸಾಜ ರಾಧಾಕೃಷ್ಣ ಆಳ್ವ, ವಿಟ್ಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಉದಯ ಕುಮಾರ್, ರಾಜೇಶ್ ಬಾಳೆಕಲ್ಲು, ಪುತ್ತೂರು ಮಂಡಲ ಕಾರ್ಯದರ್ಶಿ ಶ್ರೀ ಕೃಷ್ಣ ವಿಟ್ಲ ಜಗನ್ನಾಥ ಕಾಸರಗೋಡು, ರಾಮ್‌ದಾಸ್ ಶೆಣೈ, ಮೋಹನ್‌ದಾಸ್ ಉಕ್ಕುಡ, ಸದಾನಂದ ಗೌಡ ಸೇರಾಜೆ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ರವಿಪ್ರಕಾಶ್ ವಿಟ್ಲರವರು ಪ್ರಸ್ತುತ ಎರಡನೇ ಬಾರಿ ಪಟ್ಟಣ ಪಂಚಾಯತ್ ಸದಸ್ಯರಾಗಿದ್ದಾರೆ. ಈ ಹಿಂದೆಯೂ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಎಲ್ಲರೂ ಕೈಜೋಡಿಸಿದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡುವ ಕೆಲಸಕ್ಕೆ ನಾನು ಮುನ್ನುಡಿಯಾಗುತ್ತೇನೆ
ಬಹುದೊಡ್ಡ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಿದ್ದೀರಿ. ವಿಟ್ಲದ ಸರ್ವತೋಮುಖ ಅಭಿವೃದ್ಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಕೈಜೋಡಿಸಿದಲ್ಲಿ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಮಾಡುವ ಕೆಲಸಕ್ಕೆ ನಾನು ಮುನ್ನುಡಿಯಾಗುತ್ತೇನೆ. ಯಾವುದೇ ಕೆಲಸಕ್ಕೆ ಬಂದಂತಹ ಯಾವುದೇ ವ್ಯಕ್ತಿಗಳನ್ನು ಅಲೆದಾಡಿಸುವಂತಹ ಪ್ರಸಂಗ ಇನ್ನುಮುಂದೆ ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಆಗ್ಲಿಕ್ಕಿಲ್ಲ ಎನ್ನುವ ಭರವಸೆಯನ್ನು ನಾನು ನೀಡುತ್ತೇನೆ. ಯಾರೂ ಕೂಡ ಯಾವುದೇ ಕೆಲಸಕ್ಕೆ ಬಂದರೆ ಕೂಡಲೇ ಕ್ಷಿಪ್ರ ರೀತಿಯಲ್ಲಿ ಅವರ ಕೆಲಸ ಆಗುವಂತೆ ನಾವು, ಅಧ್ಯಕ್ಷರು, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸೇರಿ ಮಾಡುತ್ತೇವೆ. ಸಮಾಜದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯವನ್ನು ದೊರಕಿಸುವುದೇ ಪಟ್ಟಣ ಪಂಚಾಯತ್‌ನ ಆದತೆ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತೇವೆ.
-ರವಿಪ್ರಕಾಶ್ ಅಧ್ಯಕ್ಷ, ಸ್ಥಾಯಿ ಸಮಿತಿ ವಿಟ್ಲ ಪಟ್ಟಣ ಪಂಚಾಯತ್