ಪುತ್ತೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಮಸೀದಿಗಳ ಅಭಿವೃದ್ದಿಗೆ ಕರ್ನಾಟಕ ವಕ್ಫ್ ಸಂಸ್ಥೆಯಿಂದ ತಲಾ 10 ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಬದ್ರಿಯಾ ಜುಮಾ ಮಸೀದಿ ವಿಸ್ತರಣೆಗೆ ರೂ 10 ಲಕ್ಷ, ಪೆರುವಾಯಿ ಗ್ರಾಮದ ಬದಿಯಡ್ಕ ನೂರುಲ್ ಇಸ್ಲಾಂ ಮಸೀದಿ ಅಭಿವೃದ್ದಿ ಕಾಮಗಾರಿಗೆ ರೂ 10 ಲಕ್ಷ, ಬಂಟ್ವಾಳ ತಾಲೂಕು ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರ ಒಳಪಟ್ಟ ಇಡ್ಕಿದು ಗ್ರಾಮದ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ನವೀಕರಣ ಕಾಮಗಾರಿಗೆ ರೂ 10 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯ ವಕ್ಫ್ ಸಂಸ್ಥೆಯು ಈ ಅನುದಾನವನ್ನು ಬಿಡುಗಡೆ ಮಾಡಿದೆ.