ಪುತ್ತೂರು: ಪವಿತ್ರವಾದ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಪತ್ರಕರ್ತ ಸಿದ್ದಿಕ್ ಕುಂಬ್ರರವರಿಗೆ ಸ್ನೇಹಿತರ ವತಿಯಿಂದ ಬೀಳ್ಕೊಡುಗೆ ಸಮಾರಂಭ ದ.10 ರಂದು ಕುಂಬ್ರ ಸುದ್ದಿ ಬಿಡುಗಡೆ ಕಛೇರಿಯಲ್ಲಿ ನಡೆಯಿತು.
ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ದ.12 ರಂದು ಸಿದ್ದಿಕ್ ಕುಂಬ್ರರವರು ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇವರ ಯಾತ್ರೆಯು ಸುಖಕರವಾಗಿರಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರಾದ ಸಿಶೇ ಕಜೆಮಾರ್, ಯೂಸುಫ್ ರೆಂಜಲಾಡಿ, ದಿನೇಶ್ ಬಡಗನ್ನೂರು ಹಾಗೂ ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯ ಉಪಸ್ಥಿತರಿದ್ದರು.