ಜೀರ್ಣೋದ್ಧಾರಗೊಳ್ಳುತ್ತಿರುವ ಆರ್ಲಪದವು ದೈವಸ್ಥಾನದಲ್ಲಿ ರಿಕ್ಷಾ ಚಾಲಕ-ಮಾಲಕರಿಂದ ಶ್ರಮದಾನ

0

ಪಾಣಾಜೆ: ಆರ್ಲಪದವು ಶ್ರೀ ಕಿನ್ನಿಮಾಣಿ- ಪೂಮಾಣಿ, ಹುಲಿಭೂತ ದೈವಸ್ಥಾ‌ನದಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ಜನವರಿ 19, 20 ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.
ಆ ಪ್ರಯುಕ್ತ ನೂತನ ದೈವಸ್ಥಾ‌ನದ ಮೇಲ್ಛಾವಣಿಗೆ ಹಂಚು ಇಡುವ ಕಾರ್ಯ ದ.10 ರಂದು ನಡೆಯಿತು.

ಆರ್ಲಪದವು ಪೇಟೆಯ ರಿಕ್ಷಾ ಚಾಲಕ ಮಾಲಕರು ಶ್ರಮದಾನದಲ್ಲಿ ಪಾಲ್ಗೊಂಡರು. ದೈವಸ್ಥಾ‌ನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here