ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಡಿ.10ರಂದು ಶಾಲೆಯ ಸಂಸ್ಥಾಪಕರಾದ ದಿ. ಮೊನ್ಸಿಂಜರ್ ಆ್ಯಂಟನಿ ಪತ್ರಾವೊರ ಜನ್ಮದಿನವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಶಿಕ್ಷಣ ಕ್ರಾಂತಿಯ ಹರಿಕಾರ ಮೊನ್ಸಿಂಜರ್ ಆ್ಯಂಟನಿ ಪತ್ರಾವೊರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಿಸ್ತಿನ ಸಿಪಾಯಿಯಾಗಿ, ಆರೋಗ್ಯಕ್ಕೆ ಹೆಚ್ಚು ಪ್ರಾಶ್ಯಸ್ತ ಕೊಡುತ್ತಿದ್ದ ಶಾಲಾ ಸಂಸ್ಥಾಪಕರ, ಜನ್ಮ ದಿನ ಪ್ರಯುಕ್ತ ವಿದ್ಯಾರ್ಥಿನಿಯರಿಗಾಗಿ ‘ಆರೋಗ್ಯ ಸಂಕಲ್ಪ’ ಎಂಬ ಕಾರ‍್ಯಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸುನಿಲ್ ರಾಮಕೃಷ್ಣ ಮಾತನಾಡಿ, ಉತ್ತಮ ಆರೋಗ್ಯ ನಮ್ಮ ಸಂಪತ್ತು, ಈ ಸಂಪತ್ತು ನಮ್ಮನ್ನು ಪ್ರಗತಿಯುತ್ತ ಕೊಂಡು ಹೋಗುತ್ತದೆ ಎಂದು ತಿಳಿಸಿದ ಅವರು ಆರೋಗ್ಯಯುತ ಜೀವನ ನಡೆಸಲು ಬೇಕಾಗುವ ಮಾರ್ಗೋಪಾಯಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿನಿಯರಿಗೆ ತಿಳಿಯಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ರೋಸಲಿನ್ ಪ್ಲೇವಿ ಲೋಬೊ ಮಾತನಾಡಿ ಆಧುನಿಕ ಪೂತ್ತೂರಿನ ನಿರ್ಮಾಪಕರಾದ ದಿ. ಮೊನ್ಸಿಂಜರ್ ಆ್ಯಂಟನಿ ಪತ್ರಾವೊರವರು ತನ್ನ ಬೆವರು ಮತ್ತು ರಕ್ತದಿಂದ ಕಟ್ಟಿದ ಈ ಶಾಲೆ ಹಾಗೂ ಮಾಯಿ ದೆ ದೇವುಸ್ ಶಿಕ್ಷಣ ಸಂಸ್ಥೆಗಳಿಗೆ ಅವರು ನೀಡಿದ ಕೊಡುಗೆಗಳನ್ನು ತಿಳಿಸಿ ಸಂಸ್ಥಾಪಕರು ತೋರಿದ ಹಾದಿಯಲ್ಲಿ ನಡೆಯೋಣ ಎಂದು ತಿಳಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಪಿ.ಎಂ ಅಶ್ರಫ್, ಶಿಕ್ಷಕಿ ರೂಪ ಡಿಕೋಸ್ಟ ಮಾತನಾಡಿದರು. ಶಾಲಾ ನಾಯಕಿ ಸಮೀಕ್ಷಾ, ಉಪನಾಯಕಿ ಮಾನ್ಯ ಉಪಸ್ಥಿತರಿದ್ದರು. ಶಿಕ್ಷಕಿ ಶೈಲಾ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.