ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷೆಯಾಗಿ ಇವಾನ್ ಮಸ್ಕರೇನ್ಹಸ್, ಕಾಯದರ್ಶಿಯಾಗಿ ರೀನಾ ತೆರೆಜ್ ರೆಬೆಲ್ಲೊ

ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ 2024-25ನೇ ಸಾಲಿನ ಮಹಾಸಭೆ ಡಿ.7 ಶಾಲೆಯ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಫಾ| ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಹಿರಿಯ ವಿದ್ಯಾರ್ಥಿ ಸಂಘವು ಶಾಲೆ ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಜೊತೆಗೆ ಸಾಗುವ ಕೊಂಡಿಯಾಗಿದೆ. ನಾವು ಕಲಿತ ಶಾಲೆ, ಗುರುಗಳು ಅನುಭವಗಳು ಮರೆಯುವಂತದ್ದಲ್ಲ. ಶಾಲೆಯು ನಮ್ಮ ಜೀವನ ರೂಪಿಸುವ ದಾರಿಯಾಗಿದೆ. ಶಾಲೆಯೊಂದಿಗೆ ಸಂಬಂಧ ಬೆಳೆಸಿಕೊಂಡು, ಶಾಲೆಯ ಒಳಿತಿಗೆ ಅಭಿಮಾನದೊಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯರು, ಹಿರಿಯ ವಿದ್ಯಾರ್ಥಿನಿಯಾಗಿರುವ ರೋಸಲಿನ್ ಲೋಬೊರವರು ಮಾತನಾಡಿ, ನಾವೆಲ್ಲರೂ ಹಿರಿಯ ವಿದ್ಯಾರ್ಥಿಗಳು ಎಂದು ಹೇಳಲು ನಮಗೆ ಅಭಿಮಾನವಿದೆ. ಹಿರಿಯ ವಿದ್ಯಾರ್ಥಿನಿಯಾಗಿ ಶಾಲೆಗೆ ನಮ್ಮ ಕೊಡುಗೆ ಅಮೂಲ್ಯವಾದದ್ದು. ಶಾಲಾ ಅಮೃತ ಮಹೋತ್ಸವದಂತಹ ಕಾರ್ಯಗಳಲ್ಲಿ ಹಿರಿಯ ವಿದ್ಯಾರ್ಥಿನಿಯರು ಬೆನ್ನಲುಬಾಗಿ ನಿಂತಿದ್ದಾರೆ. ಇನ್ನು ಕೂಡ ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

ಪದಾಧಿಕಾರಿಗಳ ಆಯ್ಕೆ:

ಮಹಾಸಭೆಯಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇವಾನ್ ಮಸ್ಕರೇನ್ಹಸ್, ಉಪಾಧ್ಯಕ್ಷರಾಗಿ ಫ್ಲೇನ್ಸಿ ಸುವಾರಿಸ್, ಕಾಯದರ್ಶಿಯಾಗಿ ರೀನಾ ತೆರೆಜ್ ರೆಬೆಲ್ಲೊ, ಜೊತೆ ಕಾರ್ಯದಶಿಯಾಗಿ ಸುನಿತಾ ಪಿಂಟೊ, ಕೋಶಾಧಿಕಾರಿಯಾಗಿ ಶೈಲಾ ಮಸ್ಕರೇನ್ಹಸ್‌ರವರು ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ನ.30ರಂದು ನಿವೃತ್ತರಾದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟ ಪ್ಯಾಸ್ ಇವರನ್ನು ಹಿರಿಯ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು. ಶಿಕ್ಷಕಿ ರೀನಾ ತೆರೆಜ್ ರೆಬೆಲ್ಲೊರವರು ಮನೋರಂಜನಾ ಆಟವನ್ನು ನಡೆಸಿದರು, ಸಂಘದ ನೂತನ ಅಧ್ಯಕ್ಷೆ ಇವಾನ್ ಮಸ್ಕರೇನ್ಹಸ್ ರವರು ಬಹುಮಾನವನ್ನು ವಿತರಿಸಿದರು.

ಶಿಕ್ಷಕ-ಶಿಕ್ಷಕೇತರ ವೃಂದದವರು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷೆ ಇವಾನ್ ಮಸ್ಕರೇನ್ಹಸ್ ಸ್ವಾಗತಿಸಿದರು. ಕಾರ್ಯದರ್ಶಿ ರೀನಾ ತೆರೆಜ್ ರೆಬೆಲ್ಲೊ ವರದಿ ವಾಚಿಸಿದರು. ಕೋಶಾಧಿಕಾರಿ ಶೈಲಾ ಮಸ್ಕರೇನ್ಹಸ್‌ರವರು ಲೆಕ್ಕಪತ್ರ ಮಂಡಿಸಿದರು. ಶಿಕ್ಷಕಿ ಲೆನಿಟಾ ಪ್ರಿಯಾ ಮೊರಾಸ್ ವಂದಿಸಿದರು. ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here