ಪುತ್ತೂರು: ಬನ್ನೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗ್ರಾಮ ಸಮಿತಿ ಸಭೆಯು ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ರಾಮಚಂದ್ರ ಗೌಡ ಅವರ ನಿವಾಸದಲ್ಲಿ ಡಿ.10ರಂದು ನಡೆಯಿತು.
ಬನ್ನೂರು ವಲಯ ಮಟ್ಟದ ಕ್ರೀಡೋತ್ಸವ ಮತ್ತು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ದಶಮಾನೋತ್ಸವ ಕುರಿತು ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್, ಯುವ ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಯುವ ಒಕ್ಕಲಿಗ ಗೌಡ ಬನ್ನೂರು ವಲಯ ಮತ್ತು ಬೆಳ್ಳಿಪ್ಪಾಡಿ ಗ್ರಾಮ ಸಮಿತಿಯ ಪದಾಧಿಕಕಾರಿಗಳ ಸಮ್ಮುಖದಲ್ಲಿ ಗ್ರಾಮದ ಸಮಾಜ ಬಾಂಧವರಿಗೆ ವಿವಿಧ ಮಾಹಿತಿ ನೀಡಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜ.1 ಮತ್ತು 2ರಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದಲ್ಲಿ ನಡೆಯುವ ರಜತ ಮಹೋತ್ಸವ ಮತ್ತು ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ ವಾರ್ಷಿಕ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಹಾಗು ಜ.4ರಂದು ಪುತ್ತೂರಿನಲ್ಲಿ ನಡೆಯುವ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘದ ದಶಮಾನೋತ್ಸವದಲ್ಲಿ ಸಮಾಜದ ಎಲ್ಲಾ ಬಾಂಧವರು ಭಾಗವಹಿಸುವಂತೆ ವಿನಂತಿಸಿದರು. ಈ ಸಂದರ್ಭ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಕೆ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ, ಪ್ರೇಮಚಂದ್ರ ಗೌಡ, ಗಣೇಶ್ ಗೌಡ, ಮೋಹನ್ ಕಬಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಣ್ಣ ಗೌಡ ಗುಂಡೋಳೆ, ಪ್ರಶಾಂತ್ ಕೆಮ್ಮಾಯಿ, ನಾರಾಯಣ ಗೌಡ ಯು, ರಮೇಶ್ ಗೌಡ ನೀರ್ಪಾಜೆ ಬನ್ನೂರು, ಆನಂದ ಗೌಡ ಪಡ್ನೂರು, ವಸಂತ ಗೌಡ ನೆಕ್ರಾಜೆ ಕಬಕ, ಪ್ರಕಾಶ್ ಕೆಮ್ಮಾಯಿ, ರಮೇಶ್ ಕೈಲಾಜೆ, ಕಿರಣ್ ಗೌಡ ಕೈಲಾಜೆ, ಗಣೇಶ್ ಗೌಡ ಕೈಲಾಜೆ, ಲಕ್ಷ್ಮಣ್ ಗೌಡ ಬೆಳ್ಳಿಪ್ಪಾಡಿ, ಬಿ.ವಿಶ್ವನಾಥ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.