ಈಶ್ವರಮಂಗಲ ಮಾಡದಗುಡ್ಡೆ ಕಿನ್ನಿಮಾಣಿ, ಪೂಮಾಣಿ ದೈವಗಳ ಮಾಡದ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ

0

ಪುತ್ತೂರು: ಈಶ್ವರಮಂಗಲ ಮಾಡದಗುಡ್ಡೆ ಕಿನ್ನಿಮಾಣಿ, ಪೂಮಾಣಿ ದೈವಗಳ ಮಾಡ ನವೀಕರಣ ಮಾಡುವ ಬಗ್ಗೆ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ನಡೆಯಿತು.

ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಪ್ಪ ಮಾಸ್ತರ್ ಬೊಮ್ಮಟ್ಟಿ, ರಾಮ ಮೇನಾಲ, ಸುರೇಶ ಆಳ್ವ, ವಿಕ್ರಮ ರೈ ಸಾಂತ್ಯ, ರತನ್ ಕುಮಾರ್ ನಾಕ್, ಪ್ರವೀಣ್ ರೈ, ಗಿರೀಶ್ ರೈ ಮರಕ್ಕಡ ಸೇರಿದಂತೆ ಹಲವು ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಜ.15ರಂದು ನೂತನ ಮಾಡಕ್ಕೆ ಭೂಮಿಪೂಜೆ
ಜ.15ರಂದು ಶ್ರೀಪಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಮಾಡದಗುಡ್ಡೆಯಲ್ಲಿ ದೈವಗಳ ನೂತನ ಮಾಡ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here