ಗೌರವಾಧ್ಯಕ್ಷರಾಗಿ ಅಸ್ಸಯ್ಯದ್ ಪುತ್ತೂರು ತಂಙಳ್, ಅಧ್ಯಕ್ಷರಾಗಿ ಅಶ್ರಫ್ ಸಾರೆಪುಣಿ, ಪ್ರ.ಕಾರ್ಯದರ್ಶಿಯಾಗಿ ಎಚ್.ಎ ಇಕ್ಬಾಲ್ ಆಯ್ಕೆ
ಪುತ್ತೂರು: ದಾರುಲ್ ಉಲೂಮ್ ಮದರಸ ಕಮಿಟಿ ಸಾರೆಪುಣಿ ಇದರ ವಾರ್ಷಿಕ ಮಹಾ ಸಭೆ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅವರ ಅಧ್ಯಕ್ಷತೆಯಲ್ಲಿ ಸಾರೆಪುಣಿ ಮದರಸದಲ್ಲಿ ನಡೆಯಿತು.
2023-24ರ ಸಾಲಿನ ವರದಿಯನ್ನು ಕಾರ್ಯದರ್ಶಿ ಎಚ್.ಎ ಇಕ್ಬಾಲ್ ವಾಚಿಸಿದರು. ನಂತರ 2024-25ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅಧ್ಯಕ್ಷರಾಗಿ ಅಶ್ರಫ್ ಸಾರೆಪುಣಿ, ಉಪಾಧ್ಯಕ್ಷರಾಗಿ ಅಬ್ದುಲ್ ಶಕೂರ್ ದಾರಿಮಿ, ಪ್ರ.ಕಾರ್ಯದರ್ಶಿಯಾಗಿ ಎಚ್.ಎ ಇಕ್ಬಾಲ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಕುಯ್ಯಾರ್ ಅವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ರಫೀಕ್, ಸಾರೆಪುಣಿ, ಲೆಕ್ಕ ಪರಿಶೋಧಕರಾಗಿ ಜಿ ಇಕ್ಬಾಲ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರಬಿಕುಂಞಿ ಸಾರೆಪುಣಿ, ಎಸ್.ಎನ್ ಅಬ್ದುಲ್ಲಾ, ಇಸ್ಮಾಯಿಲ್ ಘಟ್ಟಮನೆ, ಎಸ್ ಇಬ್ರಾಹಿಂ, ಅಬ್ದುಲ್ ಲತೀಫ್, ಅಬ್ದುಲ್ ರಝಾಕ್, ಉಸ್ಮಾನ್ ಸಾರೆಪುಣಿ, ಇಸ್ಮಾಯಿಲ್ ಸಾರೆಪುಣಿ ಆಯ್ಕೆಯಾದರು. ಸಲಹೆಗರರಾಗಿ ಬಿ.ಎಸ್ ಅಬ್ಬಾಸ್ ಮದನಿ ಅವರನ್ನು ಆಯ್ಕೆ ಮಾಡಲಾಯಿತು.