ಪ್ರಾಣ ಉಳಿಸಲು ಕಿಟಕಿಯ ಮೂಲಕ ಹಾರಿ ಹೋದ ಯುವಕನ ಪತ್ತೆಯೂ ಇಲ್ಲ-ಸ್ಥಳೀಯರಲ್ಲಿ ಆತಂಕ
ಕಡಬ: ಕಡಬ ಸಮೀಪ ಬೈಲಂಗಡಿ ಎಂಬಲ್ಲಿ ಬಾಡಿಗೆ ಮನೆಗೆ ರಾತ್ರಿ ನುಗ್ಗಿದ ಅಪರಿಚಿತ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿದ್ದು, ಆ ಮನೆಯೊಳಗಡೆ ಇದ್ದ ಯುವಕ ಪ್ರಾಣ ಉಳಿಸಲು ಬಾಡಿಗೆ ಮನೆಯ ಹಿಂಬಂದಿಯ ಕಿಟಕಿಯನ್ನು ಮುರಿದು ಓಡಿ ತಪ್ಪಿಸಿಕೊಂಡಿದ್ದು ಬಳಿಕ ಪೊಲೀಸ್ ಠಾಣೆಗೆ ದೂರು ನೀಡಲು ರಾತ್ರಿ 2 ಗಂಟೆಗೆ ಹೋಗಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಬೆಳಿಗ್ಗೆ ಬನ್ನಿ ಎಂದು ಹೇಳಿದ್ದರು. ಈಗಾಗಲೇ ಓಡಿ ತಪ್ಪಿಸಿಕೊಂಡಿರುವ ಯುವಕನ ಪತ್ತೆಯೂ ಇಲ್ಲದೆ ಸ್ಥಳೀಯರು ಆತಂಕಗೊಂಡಿದ್ದಾರೆ.
ಈ ಮಧ್ಯೆ ರಾತ್ರಿಯೇ ಬಾಡಿಗೆ ಮನೆಯ ಮಾಲಕರಿಗೆ ಮಾಹಿತಿ ರವಾನೆಯಾಗಿ ಮಾಲಕರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಯುವಕನಿಗೆ ಕರೆ ಮಾಡಿದಾಗ ಆ ಕರೆಯನ್ನು ಬೇರೆ ವ್ಯಕ್ತಿಗಳು ಸ್ವೀಕರಿಸಿ ಮಾಲಕರಿಗೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಾಲಕರು ತಿಳಿಸಿದ್ದಾರೆ.
ಈ ಘಟನೆಯ ವಿಚಾರದಲ್ಲಿ ಸ್ಥಳೀಯರು ಆತಂಕಗೊಂಡಿದ್ದು, ಎಸ್.ಐ. ಅಭಿನಂದನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.