ಕೆಮ್ಮಾಯಿ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

0

ಪುತ್ತೂರು: ಕರ್ನಾಟಕ ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಬಾಲವಿಕಾಸ ಸಮಿತಿ ಹಾಗೂ ಕೆಮ್ಮಾಯಿ ಅಂಗನವಾಡಿ ಕೇಂದ್ರ ಇವರ ಸಂಯುಕ್ತ ಆಶ್ರಯದ ಜೊತೆಗೆ ಲಕ್ಷ್ಮೀ ಸ್ತ್ರೀ ಸಂಘ, ಸತ್ಯಶ್ರೀ ಶಹರಿ ಸಂಘ ಮತ್ತು ಭಾಗ್ಯಶ್ರೀ ಶಹರಿ ಸಂಘ ಹಾಗೂ ಪೋಷಕ ವೃಂದದವರ ಸಹಯೋಗದೊಂದಿಗೆ ಕೆಮ್ಮಾಯಿ ಅಂಗನವಾಡಿ ಕೇಂದ್ರದಲ್ಲಿ ಡಿ.14ರಂದು ಬಾಲಮೇಳ ಕಾರ್ಯಕ್ರಮ ನಡೆಯಿತು.


ನಗರಸಭೆಯ ಅಧ್ಯಕ್ಷೆ ಲೀಲಾವತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಸಮುದಾಯದತ್ತ ಅಧಿಕಾರಿ ಚೋಟು ನಾಯ್ಕ, ನಗರಸಭೆ ಅಧ್ಯಕ್ಷೆ ಲೀಲಾವತಿ, ಕೆಮ್ಮಾಯಿ ಸ.ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯಿನಿ ಮರಿಯಮ್ಮ, ಸ್ಥಾಯಿ ಸಮಿತಿ ಅರ್ಧಯಕ್ಷ ಸುಂದರ ಪೂಜಾರಿ, ನಿವೃತ್ತ ಕಾರ್ಯಕರ್ತೆ ಸೀತಾರತ್ನ, ಸಮುದಾಯದತ್ತ ಅಧಿಕಾರಿ ಜಾನು ನಾಯ್ಕ, ಆಶಾ ಕಾರ್ಯಕರ್ತೆ, ತುಳಸಿ, ಮಕ್ಕಳ ಪೋಷಕರಾದ ಸಂತೋಷ್, ಸೌಮ್ಯ, ಯಶೋಧ, ಪೂರ್ಣಿಮಾ, ಹರೀಶ್ ಆಚಾರ್ಯ, ಮಂಜುನಾಥ ಕೆಮ್ಮಾಯಿ, ಉದಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಅಂಗನವಾಡಿಯ ಪ್ರಗತಿಪರ ಬೆಳವಣಿಗೆಯ ಕಾರ್ಯಕ್ಕೆ ಸಹಾಯ ಹಸ್ತ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ನಿವೃತ್ತ ಅಧಿಕಾರಿ ಚೋಮ ನಾಯ್ಕ ಹಾಗೂ ಹರೀಶ್ ಆಚಾರ್ಯ ಮತ್ತು ಮಂಜುನಾಥ ಕೆಮ್ಮಾಯಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಬಳಿಕ ಅಂಗನವಾಡಿ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಕಾರ್ಯಕರ್ತೆ ವನಿತಾ ಸ್ವಾಗತಿಸಿ, ಪ್ರಚಲಿತಾ ಕಾರ್ಯಕ್ರಮ ನಿರೂಪಿಸಿ, ಶಾಲಿನಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here