ಸೌತ್‌ ಝೋನ್‌ ಚಾಂಪಿಯನ್‌ ಶಿಪ್ ಗೆ ನಂದನ್ ನಾಯ್ಕ್ ಆಯ್ಕೆ

0

ಪುತ್ತೂರು: ಕರ್ನಾಟಕ ಈಜು ಸಂಸ್ಥೆ ಇವರು kensington ಸ್ವಿಮ್ಮಿಂಗ್ ಪೂಲ್ ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಶಾರ್ಟ್ ಕೋರ್ಸ್ ಡೈವಿಂಗ್ ಸ್ಪರ್ಧೆಯ ಹೈ ಬೋರ್ಡ್ ವಿಭಾಗದಲ್ಲಿ‌ ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿಯ ನಂದನ್ ನಾಯ್ಕ್ ಅವರು 1 ಬೆಳ್ಳಿ , ಹಾಗು 1 ಮೀಟರ್ ಮತ್ತು 3 ಮೀಟರ್ ಸ್ಟ್ರಿಂಗ್ ಬೋರ್ಡ್ ವಿಭಾಗದಲ್ಲಿ 2 ಕಂಚಿನ ಪದಕ ಗೆದ್ದು ಚೆನ್ನೈನಲ್ಲಿ ನಡೆಯಲಿರುವ ಸೌತ್‌ ಝೋನ್‌ ಚಾಂಪಿಯನ್‌ ಶಿಪ್ ಗೆ ಆಯ್ಕೆಯಾಗಿದ್ದಾರೆ.

ಇವರು ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ (PCMB) ಯ ವಿದ್ಯಾರ್ಥಿ .ಇವರಿಗೆ ಪಾರ್ಥ ವಾರಣಾಸಿ,ವಿಕಾಸ್‌,ವೆಂಕಟೇಶ್ ಇವರು ತರಬೇತಿ ನೀಡಿದ್ದಾರೆ. ಮುಕ್ವೆ ಮಜಲುಮಾರು ನಿವಾಸಿ ರವಿ ಸಂಪತ್ ನಾಯ್ಕ್ ಮತ್ತು ಕ್ಷಮಿತ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here