ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ ಕೆದಿಲ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ, ಪಜ್ಜಡ್ಕ ಕಲ್ಕುಡ ಕಟ್ಟೆಯ ಸಮೀಪ ಕಾಲಾವಧಿಯ ಬುಡೇರಿಯಾ ಶ್ರೀ ಶಿರಾಡಿ ದೈವದ ನರ್ತನೋತ್ಸವ ನಡೆಯಿತು.
ಡಿ.13ರಂದು ತೋಟಂತಿಲ ಶ್ರೀ ಅನಂತರಾಮ ಭಟ್ ಇವರಿಂದ ಪಜ್ಜಡ್ಕದಲ್ಲಿ ನಾಗತಂಬಿಲ ಶ್ರೀ ರಕ್ತೇಶ್ವರಿ ದೈವಕ್ಕೆ ತಂಬಿಲ ನಡೆದು.ಡಿ.14ರಂದು ಬ್ರಹ್ಮಶ್ರೀ ವೇ.ಮೂ ತಂತ್ರಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಶಿರಾಡಿ ದೇವಸ್ಥಾನದಲ್ಲಿ ಗಣಹೋಮ,ಶ್ರೀ ಚಾಮುಂಡಿ ಆಲಿದೈವಗಳ ಪ್ರತಿಷ್ಠೆ, ಆಶ್ಲೇಷ ಬಲಿ,ದೈವಗಳಿಗೆ ಕಲಶಾಭಿಷೇಕ,ತಂಬಿಲ ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಕೆದಿಲದಲ್ಲಿ ಶ್ರೀ ಶಿರಾಡಿ ದೈವದ ಭಂಡಾರ ತೆಗೆದು ಅದೇ ಸಮಯಕ್ಕೆ ನರ್ತನೋತ್ಸವದ ಸ್ಥಳದಲ್ಲಿ ಕಲ್ಕುಡ, ಕಲ್ಲುರ್ಟಿ,ಪಂಜುರ್ಲಿ,ಗುಳಿಗ ದೈವಗಳ ಭಂಡಾರ ತೆಗೆದು ರಾತ್ರಿ ಭಜನಾ ಕಾರ್ಯಕ್ರಮ ನಡೆದು ಅನ್ನಪ್ರಸಾದ ನಡೆದು ಕಲ್ಕುಡ, ಕಲ್ಲುರ್ಟಿ, ಚಾಮುಂಡಿ ಹಾಗೂ ಆಲಿ ದೈವಗಳ ನರ್ತನೋತ್ಸವ ನಡೆಯಿತು.
ಡಿ.15ರಂದು ಬೆಳಿಗ್ಗೆ ಶ್ರೀ ಶಿರಾಡಿ ದೈವದ ನರ್ತನೋತ್ಸವ,ಹರಿಕೆ ಒಪ್ಪಿಸುವುದು, ಅನ್ನಪ್ರಸಾದ ವಿತರಣೆ, ಬಲಿಯೊಂದಿಗೆ ಗಡಿ ಜಾಗಕ್ಕೆ ಪ್ರಯಾಣ ನಡೆಯಿತು.
ಅಗಮಿಸಿದ ಭಕ್ತಾದಿಗಳು ದೈವಗಳ ಶ್ರೀಮುಡಿ ಗಂಧ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆ ಪಾಲ್ಗೊಂಡರು. ಈ ಸಂದರ್ಭದಲ್ಲಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಸೇರಿದಂತೆ ಪ್ರಮುಖ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.