ಕುಮಾರಮಂಗಲ : ಸರಕಾರಿ ಹಿರಿಯಪ್ರಾಥಮಿಕ.ಶಾಲಾ ವಾರ್ಷಿಕ ಕ್ರೀಡಾಕೂಟ 

0

ಸವಣೂರು : ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಹಿ.ಪ್ರಾ. ಶಾಲೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘ, ಕುಮಾರಮಂಗಲ ಇದರ ಜಂಟಿ ಆಶ್ರಯದಲ್ಲಿ ವಾರ್ಷಿಕ ಕಲೋತ್ಸವ ಸಂಭ್ರಮ-2024 ಇದರ ಅಂಗವಾಗಿ ಡಿ.14 ರಂದು ಶಾಲಾ ಮಕ್ಕಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರು ಮತ್ತು ಗ್ರಾಮಸ್ಥರಿಗೆ ವಾರ್ಷಿಕ ಕ್ರೀಡಾಕೂಟ ನಡೆಯಿತು.

ಕಾರ್ಯಕ್ರಮವನ್ನು  ಕ್ರೀಡಾಜ್ಯೋತಿಯೊಂದಿಗೆ  ಪ್ರಗತಿಪರ ಕೃಷಿಕರಾದ ಸುಬ್ರಾಯ ನಿಡ್ವಣ್ಣಾಯ,ಬಂಬಿಲ ದೀಪ ಬೆಳಗಿಸಿ ಮಾತನಾಡಿ, ಕುಮಾರಮಂಗಲ ಶಾಲೆಯು ಉತ್ತಮವಾದ ಹಿನ್ನೆಲೆಯನ್ನು ಹೊಂದಿರುವ ಶಾಲೆಯಾಗಿದ್ದು ,ಅದನ್ನು ಉಳಿಸುವ ಪ್ರಯತ್ನ ನಡೆಯಬೇಕು ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಬಾಳಪ್ಪ ಪೂಜಾರಿ ಬಂಬಿಲದೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,ಮಾತನಾಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು,ಶಾಲೆಗೆ ಅಭಿವೃದ್ದಿಗೆ ಎಲ್ಲರೂ ಸಹಕರಿಸಬೇಕು ಎಂದರು.

ವೇದಿಕೆಯಲ್ಲಿಎಸ್.ಡಿ.ಎಂ.ಸಿ, ಯ ಅಧ್ಯಕ್ಷರಾದ ಸುಂದರ.ಕೆ,  ಎ.ಪಿ.ಎಂ.ಸಿ, ಪುತ್ತೂರು ಮಾಜಿ ಸದಸ್ಯರಾದ ಸೋಮನಾಥ. ಡಿ. ಕನ್ಯಾಮಂಗಲ, ಗ್ರಾ. ಪಂ. ಸವಣೂರು ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ ,ಗಿರಿಶಂಕರ ಸುಲಾಯ,ಯಶೋಧ ನೂಜಾಜೆ,ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ. ವಿ. ಯು, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿಯಾದ ಪುಟ್ಟಣ್ಣ ಬಂಬಿಲ , ಹಿರಿಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿಯಾದ ಉಮೇಶ್ ಬೇರಿಕೆ, ಸವಣೂರಿನ ವರಾಹ ಮೆಡಿಕಲ್ ಮಾಲಕರಾದ ಪ್ರಕಾಶ್ ರಾಜ್ ನೂಜಾಜೆ, ಕಡಬ ಆರಕ್ಷಕ ಠಾಣೆ,  ಪೊಲೀಸ್ ಅಧಿಕಾರಿ ಹರೀಶ್ ತೋಟತಡ್ಕ,ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗರರಾದ ವಿಶ್ವನಾಥ ಕನ್ಯಾಮಂಗಲ, ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಸವಣೂರು, ಉಪಾಧ್ಯಕ್ಷರಾದ ಆಶಾ ರೈ ಕಲಾಯಿ, ಮಂಗಳೂರಿನ ಉದ್ಯಮಿಯಾದ ಯತೀಶ್ ಬಾಳೆ ಹಿತ್ಲು, ಎಚ್.ಸಿ.ಎಲ್, ಟೆಕ್, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಖಿತ್ ರೈ ಬುಡನಡ್ಕ, ಸವಣೂರಿನ ಮೋಹಿತ್ ಟೈಲರ್  ಮಾಲಕರಾದ ಬಾಬು ಗೌಡ ಪೂಜಾರಿಮೂಲೆ, ಸವಣೂರು ಗ್ರಾ. ಪಂ, ಮಾಜಿ ಅಧ್ಯಕ್ಷರಾದ ಇಂದಿರಾ ಬಿ. ಕೆ, ಪ್ರಗತಿಪರ ಕೃಷಿಕರಾದ ಕೊರಗಪ್ಪಗೌಡ ಕುಮಾರಮಂಗಲ,ಪ್ರಗತಿಪರ ಕೃಷಿಕರಾದ ಪುಟ್ಟಣ್ಣಗೌಡ ಬದಿಯಡ್ಕ, ಅಂಗನವಾಡಿ ಶಿಕ್ಷಕಿಯಾದ ಜಾನಕಿ ಕನ್ಯಾಮಂಗಲ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಹೇಮಲತಾ ಎಸ್.ಡಿ.ಎಂ.ಸಿ ಯ ಸದಸ್ಯ ರಾದ  ರಮೇಶ್, ವೇದಾವತಿ, ಸರಿತಾ,ಜಯಂತಿ,ರೇಖಾ, ಸೇಸಮ್ಮ,ಯಮುನಾ, ಸುರೇಖಾ,ಮಮತಅವಿನಾಶ್, ಸ್ಮಿತಾ, ಶ್ಯಾಮಲಾ,ಕುಸುಮ, ವಿಶ್ವನಾಥ್,ಜಗದೀಶ್, ಅಕ್ಕು,ಗಂಗಾಧರ್, ನಾಗೇಶ್ ,ಶಾಲಾ ನಾಯಕಿ ರಶ್ಮಿ. ಆರ್ ಮೊದಲಾದ ವರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ,ವಕೀಲ ಮಹೇಶ್. ಕೆ, ಸವಣೂರು ಸ್ವಾಗತಿಸಿದರು. ಶಾಲೆಯ ಮುಖ್ಯಗುರುಗಳು ಸಂತೋಷ್ ಎನ್.ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಅತಿಥಿ ಶಿಕ್ಷಕರಾದ ಶ್ಯಾಮ್. ಕೆ ವಂದಿಸಿದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ರಾಜೇಶ್ವರಿ ಮತ್ತು ಅತಿಥಿ ಶಿಕ್ಷಕಿ ಕಾವ್ಯಶ್ರೀ ಸಹಕರಿಸಿದರು.

LEAVE A REPLY

Please enter your comment!
Please enter your name here