ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಕಥಾ ವಾಚನ, ಪ್ರವಚನ ಕಾರ್ಯಕ್ರಮ ದ. 15 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ವಿಶೇಷ ಮಂಟಪ ಹಾಗೂ ಅಲಂಕಾರದೊಂದಿಗೆ ದೇವರ ಪೂಜೆಯನ್ನು ನೆರವೇರಿಸಲಾಯಿತು.ವೇದಮೂರ್ತಿ ನಾಗರಾಜ್ ಭಟ್ರವರಿಂದ ವೈದಿಕ ಕಾರ್ಯಕ್ರಮಗಳು ಜರಗಿತು. ಕಿರಣ್ ಕುಮಾರ್ ಪಡುಪಣಂಬೂರು, ಗೀತಾ ಹಾಗೂ ಡಾ.ಸತ್ಯನಾರಾಯಣ ಪುಣಿಚಿತ್ತಾರವರು ಶ್ರೀ ಸತ್ಯನಾರಾಯಣ ಪೂಜೆಯ ಕಥಾವಚನ ಮತ್ತು ಪ್ರವಚನವನ್ನು ನಡೆಸಿಕೊಟ್ಟರು. ಅಬುಧಾಬಿಯ ಇಂಡಿಯಾ ಸೋಷಿಯಲ್ ಮತ್ತು ಕಲ್ಚರಲ್ ಸೆಂಟರ್ನ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈಯವರು ಅನ್ನಸಂತರ್ಪಣೆಯ ಸೇವಾಕರ್ತರಾಗಿ ಸಹಕರಿಸಿದರು.
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ, ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ, ಮಾಜಿ ಉಪಾಧ್ಯಕ್ಷರಾದ ಚಿಲ್ಮೆತ್ತಾರು ಜಗಜೀವನ್ದಾಸ್ ರೈ, ರೋಶನ್ ರೈ ಬನ್ನೂರು, ಮಾಜಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ನಿಕಟಪೂರ್ವ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶಕರುಗಳಾದ ಜೈರಾಜ್ ಭಂಡಾರಿ ಡಿಂಬ್ರಿ, ವಾಣಿ ಶೆಟ್ಟಿ ನೆಲ್ಯಾಡಿ, ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿ, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ತಾಲೂಕು ಬಂಟರ ಸಂಘದ ನಿರ್ದೇಶಕರಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಸತೀಶ್ ರೈ ಕಟ್ಟಾವು, ನಿತಿನ್ ಪಕ್ಕಳ, ಶಿವಪ್ರಸಾದ್ ಶೆಟ್ಟಿ ಕಿನಾರ, ಎಂ.ಆರ್ ಜಯಕುಮಾರ್ ರೈ, ಸ್ವರ್ಣಲತಾ ರೈ, ಸಂದೀಪ್ ರೈ ಚಿಲ್ಮೆತ್ತಾರು, ರಾಜೀವ ರೈ ಕುತ್ಯಾಡಿ, ಅನ್ನಪೂರ್ಣಿಮಾ ರೈ, ಮಲ್ಲಿಕಾ ಜೆ. ರೈ, ರವೀಂದ್ರ ರೈ ನೆಕ್ಕಿಲು, ಸಂದೇಶ್ ರೈ, ಭಾಗ್ಯೇಶ್ ರೈ, ಸದಾಶಿವ ರೈ ಮಠಂತಬೆಟ್ಟು, ಪಿ.ಡಿ. ಕೃಷ್ಣ ಕುಮಾರ್ಐ, ಕೃಷ್ಣವೇಣಿ, ರಮೇಶ್ ರೈ ಬೊಳಿಕಳ, ಅಶೋಕ್ ರೈ ದೇರ್ಲ, ರವಿಚಂದ್ರ ರೈ ಕುಂಬ್ರ ಸೇರಿದಂತೆ ನೂರಾರು ಮಂದಿ ಬಂಟ ಸಮಾಜದ ಮುಖಂಡರು ಭಾಗವಹಿಸಿದರು.
ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ನಿಕಟಪೂರ್ವ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು, ಧಾರ್ಮಿಕ ಸಂಚಾಲಕ ಮನ್ಮಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿ ಶಿವಶ್ರೀರಂಜನ್ ರೈ ದೇರ್ಲ, ಜೊತೆ ಕಾರ್ಯದರ್ಶಿ ಶುಭ ರೈ, ನಿಕಟಪೂರ್ವ ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.