ಮಕ್ಕಳ ಆರೋಗ್ಯ ವೃದ್ಧಿಸಲು ಕ್ರೀಡೆ ಅತ್ಯಗತ್ಯ: ಜಯಂತ ಪೂಜಾರಿ
ಕೆಯ್ಯೂರು: ಸರಕಾರಿ ಪದವಿಪೂರ್ವ ಕಾಲೇಜು ಕೆಯ್ಯೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕ ಕ್ರೀಡಾಕೂಟವು ಡಿ.10ರಂದು ನಡೆಯಿತು. ದ್ವಜಾರೋಹಣವನ್ನು ಕೆಯ್ಯೂರು ಗ್ರಾ.ಪಂ.ಸದಸ್ಯೆ ಮೀನಾಕ್ಷಿ ವಿ.ರೈ ನೆರವೇರಿಸಿದರು.
ಕೆಯ್ಯೂರು ಗ್ರಾ.ಪಂ.ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ದ್ವೀಪ ಪ್ರಜ್ವಲಿಸಿ ಉದ್ಘಾಟಿಸಿ, ಶಿಕ್ಷಣದ ಜೊತೆಗೆ ಕ್ರೀಡೆಯು ಅತ್ಯಗತ್ಯ , ಮಕ್ಕಳು ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಉತ್ತಮ ರೀತಿಯಲ್ಲಿ ಕ್ರೀಡೆ ಯಲ್ಲಿ ಭಾಗವಹಿಸಿದಾಗ ಮಕ್ಕಳ ಆರೋಗ್ಯ ವೃದ್ದಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಎಸ್ ಕೆಯ್ಯೂರು ಕಾರ್ಯಾಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಮಾತನಾಡಿ, ಕ್ರೀಡೆ ಎನ್ನುವುದು ಮನುಷ್ಯನ ಜೀವನಕ್ಕೆ ಮಾದರಿ, ಕ್ರೀಡೆಗಳಿಂದ ಜೀವನ ಯಶಸ್ವಿಯಾಗಲು ಸಾದ್ಯ, ಕ್ರೀಡೆ ಯಲ್ಲಿ ಸೋಲು,ಗೆಲುವು ಸಮಾನವಾಗಿ ಸ್ವೀಕರಿಸಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಪಟುಗಳಾದ ಭವಿತ್, ಮಹಮ್ಮದ್ ಸುಹೈಲ್, ಮಹಮ್ಮದ್ ಪೈಝಲ್ ಶೇಕ್ , ಮಹಮ್ಮದ್ ಜಂಶೀದ್, ಫಾತಿಮತ್ ಶಮ್ನ, ಆಯಿಷತ್ ಶಿಫಾನ, ಸ್ವಾಗತ್ ಹಾಗೂ ಚೇತನ್ ತಂಡದವರಿಂದ ಕ್ರೀಡಾಜ್ಯೋತಿಯನ್ನು ತಂದು ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ ಯವರಲ್ಲಿ ಕ್ರೀಡಾ ಜ್ಯೋತಿ ಯನ್ನು ಹಸ್ತಾಂತರಿಸಿದರು.
ಕೆಯ್ಯೂರು ಪ್ರೌಢಶಾಲಾ ನಾಯಕಿ ಜನನಿ ಮಕ್ಕಳಿಗೆ ಪ್ರತಿಜ್ಞಾ ಸ್ವೀಕಾರ ಬೋಧಿಸಿದರು. ಬಹುಮಾನ ವಿತರಣೆಯನ್ನು ಕೆಪಿಎಸ್ ಕುಂಬ್ರ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹುಸೈನಾರ್ ಸಂತೋಷ್ ನಗರ, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು ಎಂ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಕೆ, ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆಎಸ್ , ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯ ಶೇಷಪ್ಪ ದೇರ್ಲ ಶುಭ ಹಾರೈಸಿದರು.
ಸರಕಾರಿ ಪದವಿಪೂರ್ವ ಕಾಲೇಜು ಕೆಯ್ಯೂರಿನಲ್ಲಿ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಜಂಟಿ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಓಟಗಳು, ಜಿಗಿತಗಳು ಹಾಗೂ ಎಸೆತಗಳ ,ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು. ಎಸ್ ಡಿ ಎಂ ಸಿ, ಸದಸ್ಯರು, ಉಪನ್ಯಾಸಕರು ಹಾಗೂ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳಾದ ಸೂರಜ್, ಗಣೇಶ, ಅಕ್ಷತ್, ದುರ್ಗಾಪ್ರಸಾದ್, ಹರ್ಷಿತ್, ಉಮೇಶ, ಕೀರ್ತಿರಾಜ್, ಶಮಂತ್, ರಕ್ಷಿತ್, ಉದಯ, ಚರಣ್, ಅಜಿತ್, ಕೌಶಿಕ್, ಶರತ್ ಮತ್ತಿತರರು ಸಹಕರಿಸಿದರು.
ಕೆಪಿಎಸ್ ಕೆಯ್ಯೂರು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್ ಕ್ರೀಡಾ ಧ್ವಜಾಆರೋಹಣಗೈದರು. ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ.ಪಿ.ಸ್ವಾಗತಿಸಿ, ಜೀವ ಶಾಸ್ತ್ರ ಉಪನ್ಯಾಸಕಿ ವತ್ಸಾಲಾ ವಂದಿಸಿ,ಕೆಪಿಎಸ್ ಕೆಯ್ಯೂರು ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
ತಂಡ ಫಲಿತಾಂಶಗಳ ವಿವರ
ವೈಯಕ್ತಿಕ ಚಾಂಪಿಯನ್-
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಜವಾಹರ್ ತಂಡದ ಸಮೀಹುದ್ದೀನ್ ಹಾಗೂ ಬಾಲಕಿಯರ ವಿಭಾಗದಲ್ಲಿ ಸರ್ದಾರ್ ತಂಡದ ಅಫ್ರೀನಾ ವೈಯಕ್ತಿಕ ಚಾಂಪಿಯನ್ ಗಳಾದರು. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಜವಾಹರ್ ತಂಡದ ಕೌಶಿಕ್ , ಬಾಲಕಿಯರ ವಿಭಾಗದಲ್ಲಿ ಜವಾಹರ್ ತಂಡದ ಅನೀಸಾ ವೈಯಕ್ತಿಕ ಚಾಂಪಿಯನ್ ಗಳಾದರು. ಕಾಲೇಜು ಹುಡುಗರ ವಿಭಾಗದಲ್ಲಿ ನಿತಿನ್ ಕುಮಾರ್, ಹುಡುಗಿಯರ ವಿಭಾಗದಲ್ಲಿ ಭವ್ಯ ವೈಯಕ್ತಿಕ ಚಾಂಪಿಯನ್ ಗಳಾದರು.
ಪ್ರೌಢಶಾಲಾ ವಿಭಾಗದ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ನೇತಾಜಿ ತಂಡ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶಿವಾಜಿ ತಂಡ .14ರ ವಯೋಮಾನದ ಬಾಲಕರಲ್ಲಿ ಮಹಮ್ಮದ್ ಫೈಝಲ್ ಶೇಕ್ ಮತ್ತು ಮೋಕ್ಷಿತ್, ಬಾಲಕಿಯರ ವಿಭಾಗದಲ್ಲಿ ರಕ್ಷಿತಾ,
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಜವಾಹರ್ ತಂಡ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ನೇತಾಜಿ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಮಹಮ್ಮದ್ ಜಂಶೀದ್ ಮತ್ತು ಮೊಹಮ್ಮದ್ ಸುಹೈಲ್ ಬಾಲಕಿಯರ ವಿಭಾಗದಲ್ಲಿ ಧೃತಿ ಜೆ ರೈ ಮತ್ತು ಫಾತಿಮತ್ ಶಮ್ನ ವೈಯಕ್ತಿಕ ಚಾಂಪಿಯನ್ ಗಳಾಗಿ ಹೊರಹೊಮ್ಮಿದರು.ಕಾಲೇಜು ವಿಭಾಗದಲ್ಲಿ ಹವ್ಯ ಕೆ ಡಿ, ಮೋಕ್ಷಿತ್ ಎನ್ ವೈಯಕ್ತಿಕ ಚಾಂಪಿಯನ್ ಗಳಾದರು. ಗ್ರೀನ್ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು
ಪ್ರಾಥಮಿಕ ವಿಭಾಗದ ಸೀನಿಯರ್ ವಿಭಾಗದಲ್ಲಿ ರುಶೈದ್ ಹಾಗೂ ಶಿಫಾನ, ಜೂನಿಯರ್ ವಿಭಾಗದಲ್ಲಿ ಅನಾಸ್, ಹಾದಿಯಾ ಹಾಗೂ ಶರಧಿ ವೈಯಕ್ತಿಕ ಚಾಂಪಿಯನ್ ಗಳಾದರು. ಅಗ್ನಿಪಥ್ ತಂಡ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಪೃಥ್ವಿ ಪಥ್ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.