ಪುತ್ತೂರು: ಕುರಿಯ ಗ್ರಾಮದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.13 ಹಾಗೂ 14ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಡಿ.15ರಂದು ಸಂಜೆ ಬಿಡುಗಡೆಗೊಂಡಿತು.
ರಾಜಗೋಪಾಲ ಅಂಗಿಂತಾಯ ಮನೆಯವರು ದೇವರಿಗೆ ಚಿನ್ನದ ಸರವನ್ನು ಸಮರ್ಪಿಸಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ರಮೇಶ್ ಅಂಗಿಂತಾಯ, ಅಧ್ಯಕ್ಷ ರಾಮಣ್ಣ ನಾಯ್ಕ ಅಮ್ಮುಂಜ, ಕಾರ್ಯದರ್ಶಿ ವಿಶ್ವಜಿತ್ ಅಮ್ಮುಂಜ, ಅರ್ಚಕ ಶ್ರವಣ್ ಭಟ್ ಸೇರಿದಂತೆ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.