ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

0

ಆಲಂಕಾರು: ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಆಲಂಕಾರಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಶ್ರೀ ದುರ್ಗಾಂಬಾ ಆಟದ ಮೈದಾನ ಆಲಂಕಾರಿನಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಯವರು ವಹಿಸಿದ್ದರು. ಕ್ರೀಡಾಕೂಟವನ್ನು ಖ್ಯಾತ ಯೂಟ್ಯೂಬರ್ ವಿ.ಜೆ ವಿಖ್ಯಾತ್ ಉದ್ಘಾಟಿಸಿ ಮಾತನಾಡಿ ಅವಿರತ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಾಗೂ ಖ್ಯಾತಿ ಪಡೆಯಲು ಸಾಧ್ಯವಾಗುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯುವಾಗ ವಿದ್ಯೆ ಕಲಿಸಿದ ಗುರುಗಳನ್ನು ಮತ್ತು ಅವರ ತ್ಯಾಗವನ್ನು ಯಾವತ್ತೂ ಮರೆಯಬಾರದು ಎಂದು ತಿಳಿಸಿ ಶುಭಹಾರೈಸಿದರು.


ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ರಾಧಾಕೃಷ್ಣ ರೈ ಪರಾರಿಗುತ್ತು, ಆಲಂಕಾರು ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಮನವಳಿಕೆ, ಜನಾರ್ದನ ಗೌಡ ಕಯ್ಯಾಪೆ, ಆಡಳಿತ ಮಂಡಳಿಯ ಸದಸ್ಯರಾದ ರಾಮರಾಜ ನಗ್ರಿ, ದಯಾನಂದ ಗೌಡ ಆಲಡ್ಕ, ಆಡಳಿತ ಅಧಿಕಾರಿ ಶ್ರೀಪತಿ ರಾವ್ ಎಚ್, ಮುಖ್ಯಗುರುಗಳಾದ ನವೀನ್ ರೈ ಉಪಸ್ಥಿತರಿದ್ದರು. ಆಲಂಕಾರಿನ ಉದ್ಯಮಿಗಳಾದ ರವಳನಾಥ ಪ್ರಭು ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು.


ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಾದ ಮಧುಶ್ರೀ, ಹರ್ಷ, ಕಿಶನ್, ಶ್ರೇಯಸ್, ಯಶಸ್ವಿನಿ, ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಕೃತಿ,ಹರ್ಷ, ರೂಪಿಕ, ಧನ್ಯ ಅವರ ಪ್ರಾರ್ಥಸಿ ಪ್ರಾಂಶುಪಾಲರಾದ ರೂಪಾ ಜೆ ರೈ ಸ್ವಾಗತಿಸಿ, ಆಂಗ್ಲಭಾಷಾ ಶಿಕ್ಷಕ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಸಂಸ್ಥೆಯ ಎಲ್ಲಾ ಭೋಧಕ, ಭೋಧಕೇತರ ವೃಂದದವರು ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೇಯಸ್ ರೈ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here