ನರೇಂದ್ರ ಪ.ಪೂ. ಕಾಲೇಜಿನಲ್ಲಿ ಭಾರತ್ ಮಾತಾ ಮಂಟಪ – ಉದ್ಘಾಟನೆ

0

ಪುತ್ತೂರು: ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ.ಭಾರತದ ಶ್ರೇಷ್ಠ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ,ಜಗತ್ತಿಗೆ ಭಾರತದ ಪರಾಕ್ರಮವನ್ನು ತೋರಿದ ಭಾರತಾಂಬೆಯ ವೀರ ಪುತ್ರರ ಸ್ಮರಿಸುವ ಮೂಲಕ “ಅಖಂಡ ಭಾರತದ” ಪರಿಕಲ್ಪನೆಯ ಅರಿವನ್ನು ಇಂದಿನ ಯುವ ಪೀಳಿಗೆಯಲ್ಲಿ ಮೂಡಿಸುವ ಸಲುವಾಗಿ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಮುಕುಂದ ಶ್ಯಾಮ ಮುಳಿಯ ಇವರ ಮುಂದಾಳತ್ವದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ ಭಾರತ್ ಮಾತಾ ಮಂಟಪವನ್ನು ಪುತ್ತೂರಿನ ಮುಳಿಯ ಜ್ಯುವೆಲ್ಲರ್ಸ್ ಇದರ ಮಾಲಕ ಕೇಶವ ಪ್ರಸಾದ್ ಮುಳಿಯ ಇವರು ಉದ್ಘಾಟಿಸಿದರು.


ಈ ಸಮಾರಂಭವು ದ. 15 ರಂದು ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನಲ್ಲಿ ನಡೆಯಿತು. ಈ ಕಾರ‍್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್ ಇ., ಕೋಶಾಧಿಕಾರಿ ಅಚ್ಯುತ ನಾಯಕ್, ಪುತ್ತೂರಿನ ಮುಳಿಯ ಜ್ಯುವೆಲ್ಲರ್ಸ್ ಇದರ ಮಾಲಕ ಕೃಷ್ಣ ನಾರಾಯಣ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ನರೇಂದ್ರ ಪ.ಪೂ. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ ಬಿ., ಸದಸ್ಯರಾದ ಸೂರ‍್ಯನಾಥ ಆಳ್ವ, ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಇವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here