ಅಕ್ಷಯ ಕಾಲೇಜ್ ನಲ್ಲಿ ಸೇವಾಧಾಮ ಸೇವಾಭಾರತಿ ಪುನರ್ವಸತಿ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಸೇವಾಧಾಮ ಸೇವಾಭಾರತಿ ಪುನರ್ವಸತಿ ಕೇಂದ್ರ ವತಿಯಿಂದ ಬೆನ್ನೆಲುಬು ಸಂಬಂಧಿಸಿದಂತೆ ಸಮಸ್ಯೆಗಳು , ಅಂಗವಿಕಲತೆ, ಬೆನ್ನುಹುರಿಗೆ ಕಾರಣಗಳು ಮತ್ತು ಪರಿಹಾರದ ಬಗ್ಗೆ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ.ಕೆ ವಹಿಸಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸೇವಾಭಾರತಿ ಸೇವಾಧಾಮದ ಹಿರಿಯ ವ್ಯವಸ್ಥಾಪಕ ಚರಣ್ ಕುಮಾರ್ ಸೇವಾಭಾರತಿ ಪುನರ್ವಸತಿ ಕೇಂದ್ರ ವತಿಯಿಂದ ಲಭ್ಯವಾಗುವ ಸೇವೆಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸುಕುಮಾರ್ ಸ್ವಯಂಸೇವಕ ಸೇವಾಭಾರತಿ , ಮೇಘಶ್ರೀ ಯೋಜನಾಧಿಕಾರಿ ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ಗಂಧರ್ವ ಸಹಯೋಜನಾಧಿಕಾರಿ ರಾಷ್ಟ್ರೀಯ ಸೇವಾ ಯೋಜನೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಘಟಕದ ನಾಯಕ,ನಾಯಕಿಯರು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ, ಸೇವಕಿಯರು ಪಾಲ್ಗೊಂಡಿದ್ದರು. ಸ್ಪೂರ್ತಿ ಪ್ರಾರ್ಥಿಸಿ, ವೇಣುಶ್ರೀ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here