puttur: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 26 ವರ್ಷಗಳಿಂದ ಧನುಪೂಜೆ ಪೂರ್ಣ ಒಂದು ತಿಂಗಳು ಪ್ರಾತಃ ಕಾಲ 4.30-5.45 ರವರೆಗೆ ನಡೆಯುವ” ವೇದ ಮಂತ್ರ ಪಾರಾಯಣ” ಸೇವೆಗೆ ಮಾಜಿ ಆಡಳಿತ ಮೋಕ್ತಪ ಶ್ರೀ ಯನ್.ಕೆ.ಜಗನ್ನಿವಾಸ ರಾವ್ ಮತ್ತು ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ಎ. ಶ್ರೀನಿವಾಸ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಪುತ್ತೂರು ಧನುಪೂಜೆಯ ವಿಶೇಷವಾದ ವೇದಮಂತ್ರ ಪಾರಾಯಣ ರಾಜ್ಯಾದ್ಯಾಂತ ಬಹಳ ಪ್ರಸಿದ್ಧವಾಗಿದ್ದು ಒಂದು ದಾಖಲೆಯಾಗಿದೆ. ಅಸಂಖ್ಯಾ ಭಕ್ತಾದಿಗಳು ಬಂದು ಶ್ರವಣ ಮಾಡಿ ಭಕ್ತ ಗೌರವ ತೋರುವುದು ವಿಶೇಷವಾಗಿದೆ.ಇಪ್ಪತ್ತಾರನೇಯ ವರ್ಷದ ಮಂತ್ರಘೋಷ ಸೇವೆ ಜನವರಿ 14ನೇಯ ಮಕರ ಸಂಕ್ರಮಣ ಧನುಮಾಸಂತ್ಯದವರೆಗೆ ಬೆಳಿಗ್ಗೆ 4.30 5.45ರ ವರೆಗೆ ನಡೆಯುತ್ತದೆ.
ವೇದಮೂರ್ತಿ ಬಡಜ ಜಯರಾಮ ಜೋಯಿಸರು, ಪ್ರತಿಷ್ಠಾನದ ಗೌರವ ಪ್ರಾಚಾರ್ಯ ಗುರುಗಳು ಮಂತ್ರ ಘೋಷದಿಂದ ವೇದ ಮಂತ್ರಪಾರಾಯಣದ ಸೇವಾ ಕಾರ್ಯವನ್ನು ಪ್ರಾರಂಭಿಸಿದರು. ಸೋಮವಾರದ ನಿತ್ಯಪಾರಾಯಣದ ಪ್ರಮುಖ ಕತೃಗಳಾದ ಪಿ.ಜಿ.ಜಗನ್ನಿವಾಸರಾವ್ ವಾಸ್ತುತಜ್ಞರು, ತೋಡುಗುಳಿ ಸುಬ್ರಹ್ಮಣ್ಯ ಭಟ್, ಪೆರೋಡಿ ಪದ್ಯಾಣ ಉದಯಕುಮಾರ್ ಸಹಿತ ಸುಮಾರು ಎಪ್ಪತ್ತಕ್ಕೂ ಮಿಕ್ಕಿದ ರುದ್ರಾದ್ಯಾಯಿ ವೈದಿಕರು ರುದ್ರ ಸೂಕ್ತಾದಿ ಮಂತ್ರಪುಷ್ಪಗಳನ್ನು ಸ್ವರ ಸಹಿತ ಪಾರಾಯಣ ನಡೆಸಿದರು. ಪ್ರತಿಷ್ಠಾನದ ಸ್ಥಾಪಕ ಸಂಚಾಲಕ ಬೈಂಕ್ರೋಡು ಕುಮಾರ ಸುಬ್ರಹ್ಮಣ್ಯ, ಸ್ಥಾಪಕ ಸದಸ್ಯ ಮಣಿಲಾ ಮಹಾದೇವ ಶಾಸ್ತ್ರಿ, ಉಪಸ್ಥಿತರಿದ್ದರು.
ಧನುಮಾಸದ ದಿನ ನಡೆಯುವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಬಂದು ಈ ಪುಣ್ಯ ಸೇವಾ ಕಾರ್ಯದ ಮಂತ್ರ ಘೋಷವನ್ನು ಆರೋಗ್ಯ ಮತ್ತು ಮನುಶಾಂತಿಗಾಗಿ ಶ್ರವಣ ಮಾಡಿ ಪುಣ್ಯ ಭಾಜನರಾಗುವಂತೆ ಪ್ರತಿಷ್ಠಾನದ ಅಧ್ಯಕ್ಷ ಮಾಣಿಪ್ಪಾಡಿ ಜಯರಾಮ್ ಭಟ್ ವಿನಂತಿಸಿ, ಉದ್ಘಾಟನಾ ಕಾರ್ಯಕ್ರಮ ನಿರ್ವಹಿಸಿದರು.ಕಬಕ ಕರ್ಣಾಟಕ ಬ್ಯಾಂಕ್ ನ ಪೆರೋಡಿ ಉದಯಕುಮಾರ್ ವಂದಿಸಿದರು.