ಪುತ್ತೂರು: ಬನ್ನೂರ್ ವಲಯದ ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್. (ರಿ ). ಪುತ್ತೂರು, ಜನ ಜಾಗ್ರತಿ ವೇದಿಕೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಜಂಟಿ ಆಶ್ರಯದಲ್ಲಿ ಡಿ.16ರಂದು ಕೊಂಬೆಟ್ಟು ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಾಂಶುಪಾಲ ವಸಂತಮೂಲ್ಯ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ವಲಯಧ್ಯಕ್ಷ ರಾಮಣ್ಣ ಗುಂಡೋಲೆ ವಹಿಸಿ ಮಾತನಾಡಿ ಇಂದಿನ ಸಮಾಜದಲ್ಲಿ ಹದಿ ಹರೆಯದ ಮಕ್ಕಳು ಹಾದಿ ತಪ್ಪುವ ಕೆಲಸ ಆಗುತಿದೆ. ಈ ಬಗ್ಗೆ ಮಕ್ಕಳು ಎಚ್ಚರವಾಗಿರುವಂತೆ ತಿಳಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ರಾಜೇಶ ಬೆಜಂಗಳ ಸ್ವಾಸ್ತ್ಯ ಎಂದರೆ ಅರೋಗ್ಯ ಎಂದು ಅರ್ಥ. ನಾವು ಆರೋಗ್ಯವಾಗಿರಬೇಕಾದರೆ ಯಾವುದೇ ಚಟಗಳಿಗೆ ಬಲಿಯಾಗಬಾರದೆಂದು ಹೇಳಿ, ಮಕ್ಕಳು ಒಳ್ಳೆಯ ಭವಿಷ್ಯ ರೂಪಿಸುವಂತೆ ಶುಭ ಕೋರಿದರು.
ಜನಜಾಗೃತಿ ಸದಸ್ಯರಾದ ಡಾಕ್ಟರ್ ನಾರಾಯಣ ಭಟ್ ಪ್ರತಿಜ್ಞಾ ವಿಧಿ ಬೋದಿಸಿದರು. ಬನ್ನೂರು ಒಕ್ಕೂಟದ ಅಧ್ಯಕ್ಷರು, ನಳಿನಾಕ್ಷಿ, ವಲಯ ಮೇಲ್ವಿಚಾರಕರಾದ ಸುನಿತಾ ಶೆಟ್ಟಿ, ಸೇವಾಪ್ರತಿನಿಧಿ ಗಳಾದ ಕಮಲ, ವೀಣಾ, ನಿಸ್ಮಿತಾ, ಸುರೇಖಾ. ಪಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ವೃಂದ, ಶಾಲೆಯ ಮಕ್ಕಳು ಮಾಹಿತಿ ಪಡಕೊಂಡರು.