ಓದಿಗೆ ಜೊತೆಯಾಗಲಿ ದೈಹಿಕ ಶಿಕ್ಷಣ – ಬಿ.ಕೆ.ಮಾಧವ
ಪುತ್ತೂರು: ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಶಾಲಾ ಪಠ್ಯಕ್ರಮದ ಪಾತ್ರ ಎಷ್ಟು ಮಹತ್ವದ್ದೋ, ದೈಹಿಕ ಶಿಕ್ಷಣವೂ ಅಷ್ಟೇ ಅತ್ಯಗತ್ಯ ಎಂದು ಕ್ರೀಡಾ ಮತ್ತು ಯುವಜನ ಸಬಲೀಕರಣ ನಿವೃತ್ತ ನಿರ್ದೇಶಕ ಮಾಧವ ಬಿ. ಕೆ. ಅವರು ಹೇಳಿದರು.
ಬನ್ನೂರಿನ ಎ ವಿ ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ.14 ನಡೆದ ಶಾಲಾ ವಾರ್ಷಿಕ ಕ್ರೀಡಾಕೂಟವು ಅವರು ಉದ್ಘಾಟಿಸಿ ಮಾತನಾಡಿದರು. ದೈಹಿಕ ತರಬೇತಿ ಕೇವಲ ದೈಹಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ. ಆದರೆ ದೈಹಿಕ ಶಿಕ್ಷಣದ ವ್ಯಾಪ್ತಿ ಬಹಳ ದೊಡ್ಡದು. ಅದು ಶಾರೀರಿಕ ವ್ಯಾಯಾಮವಷ್ಟೇ ಅಲ್ಲದೆ ಮತ್ತಿತರ ವಿಷಯಗಳಾದ ಸರಿಯಾದ ಆಹಾರಕ್ರಮ, ಉತ್ತಮ ಜೀವನಶೈಲಿ, ಶಿಸ್ತುಬದ್ಧ ಜೀವನ, ಸ್ಪರ್ಧಾ ಮನೋಭಾವ, ತಾಳ್ಮೆ-ಸಹನೆ ಮೊದಲಾದ ಸಫಲ ಜೀವನಕ್ಕೆ ಬೇಕಾಗುವ ಪ್ರಮುಖ ಪಾಠಗಳನ್ನು ಕಲಿಸುವಂಥದ್ದು. ಒಬ್ಬ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ದೈಹಿಕ ಶಿಕ್ಷಣ ಅತ್ಯಗತ್ಯ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಮಾಧವ ಪೆರಿಯತೋಡಿ ಅತಿಥಿಯಾಗಿ ಭಾಗವಹಿಸಿ ಕ್ರೀಡಾಕೂಟವನ್ನು ನಿರ್ವಹಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಎ ವಿ ನಾರಾಯಣ, ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕರಾದ ಗಂಗಾಧರ ಗೌಡ, ಪ್ರತಿಭಾ ದೇವಿ, ದೀಕ್ಷಾ ವಾಮನ ಗೌಡ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ಪ್ರಾಂಶುಪಾಲೆ ಸವಿತಾ ಕುಮಾರಿ ಹಾಗೂ ಬೋಧಕ ಹಾಗೂ ಬೋಧಕೇತರವೃಂದ ,ಪೋಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ರಾಧಾ ಅತಿಥಿಗಳನ್ನು ಪರಿಚಯಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೋಷಕರಿಗೆ, ಕ್ರೀಡಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಪ್ರಾಂಶುಪಾಲೆ ಸವಿತಾ ಕೆ ರವರು ಸ್ವಾಗತಿಸಿ, ಶಿಕ್ಷಕಿ ಯಶುಭ ಅವರು ವಂದಿಸಿದರು. ಶಿಕ್ಷಕಿಯರಾದ ರೀಮಾ ಲೋಬೋ ಹಾಗೂ ಹರ್ಷಿತರವರು ಕಾರ್ಯಕ್ರಮ ನಿರೂಪಿಸಿದರು.