ಯುವಸಮೂಹ ಒಗ್ಗೂಡಿ ಕೆಲಸ ಮಾಡಿದಾಗ ಸಂಘಟನೆಯು ಯಶಸ್ವಿ-ಸತೀಶ್ ಕೆಡೆಂಜಿ
ಪುತ್ತೂರು: ಯುವವಾಹಿನಿ ಸಂಘಟನೆಗೆ ಯುವಸಮೂಹ ಹೆಚ್ಚೆಚ್ಚು ಸೇರ್ಪಡೆಗೊಳ್ಳಬೇಕು. ಯುವವಾಹಿನಿ ಮುಖಾಂತರ ಸಮಾಜ ಸೇವೆಯನ್ನು ಮಾಡುತ್ತಾ ನಾಯಕತ್ವ ಗುಣವನ್ನು ಒಲಿಸಿಕೊಳ್ಳಬೇಕು ಮಾತ್ರವಲ್ಲ ಯುವಸಮೂಹ ಒಗ್ಗೂಡಿ ಕೆಲಸ ಮಾಡಿದಾಗ ಸಂಘಟನೆಯು ಯಶಸ್ವಿ ಹಾದಿಯಲ್ಲಿ ನಡೆಯಬಲ್ಲುದು ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.
ಡಿ.14ರಂದು ಪುತ್ತೂರು-ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಭಾಭವನದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ 2024-25ನೇ ಸಾಲಿನ ಪದ ಪ್ರದಾನ ಸಮಾರಂಭದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಶ್ರೀ ಮಹಾಲಿಂಗೇಶ್ವರ ಐ.ಟಿ.ಐನ ಉಪನ್ಯಾಸಕರಾದ ನಾರಾಯಣ ಪೂಜಾರಿ ಪಂಜಳ ಮಾತನಾಡಿ, ಯುವವಾಹಿನಿ ಸಂಘಟನೆಯು ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯೆಗೆ ಬಹಳ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ. ಯುವವಾಹಿನಿಯು ಶಿಸ್ತುಬದ್ಧವಾದ ಸಂಘಟನೆಯಾಗಿ ಬೆಳೆಯುತ್ತಾ ಸಮಾಜದ ಶಕ್ತಿಯಾಗಿ ಗುರುತಿಸುತ್ತಿದೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕರಾದ ಜಯಂತ್ ಬರಿಮಾರ್ ಮಾತನಾಡಿ, ವಿದ್ಯೆ-ಉದ್ಯೋಗ-ಸಂಪರ್ಕವೆಂಬ ಧ್ಯೇಯವಾಕ್ಯದಡಿಯಲ್ಲಿ ಯುವವಾಹಿನಿ ಸಂಸ್ಥೆಯು ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪುತ್ತೂರು ಯುವವಾಹಿನಿ ಸಂಘಟನೆಯು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿ ಬೆಳೆದು ನಿಂತಿದೆ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ ಯುವವಾಹಿನಿ ಘಟಕದ ಅಧ್ಯಕ್ಷರಾದ ಜಯರಾಮ್ ಬಿ.ಏನ್ ಮಾತನಾಡಿ, ಒಂದು ವರ್ಷದಲ್ಲಿ ಅನೇಕ ಕಾರ್ಯಕ್ರಮ ಮಾಡಿರುವುದು ನಮಗೆ ಹೆಮ್ಮೆಯಿದೆ ಹಾಗೂ ಹಲವು ವರುಷಗಳ ನಂತರ ನಡೆದ ಸಮಾಜ ಬಾಂಧವರಿಗಾಗಿ ಪುತ್ತೂರು ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಪ್ರತಿಯೊಂದು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಘಟಕದ ಪದಾಧಿಕಾರಿಗಳಿಗೆ, ನಿರ್ದೇಶಕರುಗಳಿಗೆ, ಸದಸ್ಯರಿಗೆ ಘಟಕದ ಮಾಜಿ ಅಧ್ಯಕ್ಷರುಗಳಿಗೆ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಕ್ರಮವು ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ನಿರ್ಗಮನ ಕಾರ್ಯದರ್ಶಿ ಸಮಿತ್ ಪಿ ವರದಿ ವಾಚಿಸಿದರು. ನೂತನ ತಂಡಕ್ಕೆ ಪ್ರತಿಜ್ಞಾವಿಧಿಯನ್ನು ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು ಬೋಧಿಸಿದರು. ಈ ಸಂದರ್ಭದಲ್ಲಿ 2023-24ನೇ ಸಾಲಿನ ನಿರ್ಗಮನ ಪದಾಧಿಕಾರಿಗಳಿಗೆ, ನಿರ್ದೇಶಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೂತನ ತಂಡದ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾ ಅಧಿಕಾರಿ ಉಮೇಶ್ ಬಾಯರ್ ಓದಿದರು. ನೂತನ ಕಾರ್ಯದರ್ಶಿ ಶರತ್ ಸಾಲ್ಯಾನ್ ವಂದಿಸಿದರು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಸರ್ವ ಸದಸ್ಯರು ಹಾಗೂ ಬಿಲ್ಲವ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪದ ಸ್ವೀಕಾರ…
ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಅಣ್ಣಿ ಪೂಜಾರಿ ಚಿಕ್ಕಮುಡ್ನೂರು, ಕಾರ್ಯದರ್ಶಿ ಶರತ್ ಸಾಲ್ಯಾನ್ ಕೈಪಂಗಳದೋಳ, ಕೋಶಾಧಿಕಾರಿ ದೀಕ್ಷಿತ್ ಇರ್ದೆ, ಉಪಾಧ್ಯಕ್ಷ ಸಮಿತ್ ಪಿ ಪರ್ಪುಂಜ, ಜೊತೆ ಕಾರ್ಯದರ್ಶಿ ಅಭಿಷೇಕ್ ಕೋಟ್ಯಾನ್, ಕ್ರೀಡಾ ನಿರ್ದೇಶಕ ಗೌತಮ್ರಾಜ್ ಸರ್ವೆ, ವ್ಯಕ್ತಿತ್ವ ವಿಕಸನ ನಿರ್ದೇಶಕ ಭವಿತ್ ಬೆದ್ರಾಳ, ಆರೋಗ್ಯ ನಿರ್ದೇಶಕ ಸತೀಶ್ ಎಚ್ ಹಿಂದಾರು, ಸಮಾಜ ಸೇವಾ ನಿರ್ದೇಶಕ ಯತೀಶ್ ಬಲ್ನಾಡು, ಕಲೆ ಮತ್ತು ಸಾಹಿತ್ಯ ನಿರ್ದೆಶಕ ಪ್ರಿಯಾಶ್ರೀ ಎಚ್ ವೀರಮಂಗಲ, ಸಾಂಸ್ಕೃತಿಕ ನಿರ್ದೇಶಕ ಮೋಹನ್ ಶಿಬಿರ, ಉದ್ಯೋಗ ಮತ್ತು ಭವಿಷ್ಯ ನಿರ್ದೇಶಕ ಲೋಹಿತ್ ಕಲ್ಕಾರ್, ನಾರಾಯಣಗುರು ತತ್ವ, ಆದರ್ಶ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಅವಿನಾಶ್ ಹಾರಾಡಿ, ವಿದ್ಯಾರ್ಥಿ ಸಂಘಟನೆ ನಿರ್ದೇಶಕ ರವಿ ಕಲ್ಕಾರ್, ಪ್ರಚಾರ ಸಮಿತಿ ನಿರ್ದೇಶಕ ಶಿವಪ್ರಸಾದ್ ಕುಂಬ್ರ, ಮಹಿಳಾ ಸಂಘಟನೆ ನಿರ್ದೇಶಕಿ ರಕ್ಷಾ ಸೇಡಿಯಾಪು, ಸಂಘಟನಾ ಕಾರ್ಯದರ್ಶಿಗಳಾದ ಕಿರಣ್ ಸರ್ವೆದೋಳ, ಮನಸ್ಮಿತಾ ಬಲ್ನಾಡು, ಜೀವನ್ ಡಿ, ದೀಕ್ಷಾ ಕೈಪಂಗಳದೋಳ, ವಿದ್ಯಾ ನಿಧಿ ನಿರ್ದೇಶಕ ಗಣೇಶ್ ಬೊಳ್ಳಗುಡ್ಡೆರವರು ಪದಪ್ರದಾನವನ್ನು ಸ್ವೀಕರಿಸಿದರು.
ಸನ್ಮಾನ..
ಈ ಸಂದರ್ಭದಲ್ಲಿ ಸಮಾಜ ಸೇವಾ ವಿಭಾಗದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್(ಮಹಾ ರಕ್ತದಾನಿ)ರವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.