ಪುತ್ತೂರು: ಮಿಸ್ಬಾಹುಸ್ಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ, ಕುಂಬ್ರ ಇದರ 10ನೇ ವಾರ್ಷಿಕೋತ್ಸವ ಮತ್ತು ತಾಜುಲ್ ಉಲಮಾ ಹಾಗೂ ಇನ್ನಿತರ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬುರ್ಧಾ ಮಜ್ಲಿಸ್ ಹಾಗೂ ನಅತೇ ಶರೀಫ್ ಡಿ.17ರಂದು ಕುಂಬ್ರ ಜಂಕ್ಷನ್ ಬಳಿ ನಡೆಯಿತು.ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ದುವಾ ನೆರವೇರಿಸಿ ನೇತೃತ್ವ ನೀಡಿದರು. ಎಸ್.ಎಂ ಬಶೀರ್ ಹಾಜಿ ಶೇಖಮಲೆ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ ಸಮಾಜದಲ್ಲಿ ಎಲ್ಲಾ ಜಾತಿ ಧರ್ಮದವರು ಒಂದಾಗಿ ಐಕ್ಯತೆಯಿಂದ ಇದ್ದರೆ ನಾಡು ನೆಮ್ಮದಿ ಕಾಣುತ್ತದೆ, ಎಲ್ಲ ಧರ್ಮಗಳೂ ಶಾಂತಿ ಮತ್ತು ಸಹಬಾಳ್ವೆಯನ್ನು ಸಾರಿದ್ದು ಉಜಿರೋಡಿಯ ಮಿಸ್ಬಾಹುಸ್ಸುನ್ನ ಯೂತ್ ಫ್ರೆಂಡ್ಸ್ನವರು ಎಲ್ಲರನ್ನು ಒಗ್ಗೂಡಿಸಿಕೊಂಡು ಮಾಡಿರುವ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದಂತೆ ನಾವು ಕೂಡಾ ಒಗ್ಗಟ್ಟಿನಿಂದ ಇದ್ದರೆ ಎಲ್ಲೂ ಯಾವುದೇ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ, ಎಲ್ಲರೂ ನಮ್ಮವರು ಎನ್ನುವ ಭಾವನೆ ನಮ್ಮಲ್ಲಿ ಮೂಡಿದಾಗ ಸಮಾಜ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗುತ್ತದೆ. ಉಜಿರೋಡಿಯ ಯುವಕರು ಹಮ್ಮಿಕೊಂಡ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ತಾಜುಲ್ ಉಲಮಾರ ಅನುಸ್ಮರಣೆ ನಾವಿಂದು ಮಾಡುತ್ತಿದ್ದು ಅವರ ಜೀವನ ವಿಧಾನ ಹಾಗೂ ನಮ್ಮ ಜೀವನ ವಿಧಾನದ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು. ಇನ್ನೊಂದು ಧರ್ಮಕ್ಕಾಗಲೀ, ವ್ಯಕ್ತಿಗಳಿಗಾಗಲೀ ತೊಂದರೆ ನೀಡದೇ ಜೀವನ ನಡೆಸುವುದು ಅತ್ಯಗತ್ಯವಾಗಿದ್ದು ಎಲ್ಲರೊಂದಿಗೂ ಸೌಹಾರ್ದಯುತ ಜೀವನ ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಅವರು ಹೇಳಿದರು.
ಉದ್ಘಾಟಿಸಿದ ಶೇಖಮಲೆ ಜುಮಾ ಮಸೀದಿಯ ಮುದರ್ರಿಸ್ ಬದ್ರುದ್ದೀನ್ ಅಹ್ಸನಿ ಮಾತನಾಡಿ ತಾಜುಲ್ ಉಲಮಾ ಈ ಸಮುದಾಯಕ್ಕೂ, ಸಮಾಜಕ್ಕೂ ಮಾದರಿಯಾದ ಪಂಡಿತರಾಗಿದ್ದು ಅವರ ಅನುಸ್ಮರಣೆ ನಮ್ಮ ಬಾಧ್ಯತೆಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೈದಾನಿಮೂಲೆ ಜುಮಾ ಮಸೀದಿ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ ಮಾತನಾಡಿ ಉಜಿರೋಡಿಯ ಮಿಸ್ಬಾಹುಸ್ಸುನ್ನ ಯೂತ್ ಫ್ರೆಂಡ್ಸ್ ಕಳೆದ 10 ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದು ಆ ಸಮಿತಿಯಲ್ಲಿರುವ ಯುವಕರು ಸೇರಿಕೊಂಡು ಬಡವರ ಕಣ್ಣೀರೊರೆಸುವ ಕಾರ್ಯವನ್ನು ಮಾಡುತ್ತಿದ್ದಾರೆ, ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಬುರ್ಧಾ ಆಲಾಪನೆ, ನಅತೇ ಶರೀಫ್:
ಸ್ವಾದಿಖ್ ಅಲಿ ಫಾಳಿಲಿ ಗೂಡಲ್ಲೂರು ಮತ್ತು ತಂಡದವರಿಂದ ಬುರ್ಧಾ ಆಲಾಪನೆ ನಡೆಯಿತು. ಮುಈನುದ್ದೀನ್ ಬೆಂಗಳೂರು ಅವರಿಂದ ನಅತೇ ಶರೀಫ್ ಆಲಾಪನೆ ನಡೆಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ಸಂಘಟಕರ ನಿರೀಕ್ಷೆಗೂ ಮೀರಿ ನೂರಾರು ಮಂದಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಾರ್ಯ ಅಲ್ ಅಮಲ್ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಕುಂಬ್ರ ಕೆಪಿಎಸ್ ಸ್ಕೂಲ್ನ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮೊಗೇರು, ಒಳಮೊಗ್ರು ಗ್ರಾ.ಪಂ ಉಪಾಧ್ಯಕ್ಷರು, ಮಿಸ್ಬಾಹುಸ್ಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ ಇದರ ಗೌರವಾಧ್ಯಕ್ಷರೂ ಆಗಿರುವ ಅಶ್ರಫ್ ಉಜಿರೋಡಿ, ಒಳಮೊಗ್ರು ಗ್ರಾ.ಪಂ ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ ಮುಡಾಲ, ಸಿರಾಜ್ ಪರ್ಪುಂಜ, ಉದ್ಯಮಿಗಳಾದ ಹಾಜಿ ಅಬ್ದುಲ್ ಹಮೀದ್ ಫ್ಯಾಮಿಲಿ, ಹುಸೈನಾರ್ ಸಂತೋಷ್ ಮಾಡಾವು, ಉಸ್ಮಾನ್ ಹಾಜಿ ಚೆನ್ನಾರ್, ಕರೀಂ ಕಾವೇರಿ, ಅಬ್ದುಲ್ ಖಾದರ್ ಹಾಜಿ ಮೇರ್ಲ, ಅಬ್ದುರ್ರಹ್ಮಾನ್ ಅಬೂನಜ ಪರ್ಪುಂಜ, ಶಾಕಿರ್ ಹಾಜಿ ಮಿತ್ತೂರು, ಅಬೂಬಕ್ಕರ್ ಸಾರೆಪುಣಿ, ಕೆ.ಎಚ್ ಜಲೀಲ್ ಹಾಜಿ ಕುಂಬ್ರ, ರಫೀಕ್ ಅಲ್ರಾಯಾ ಕುಂಬ್ರ, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಅಶೋಕ್ ಪೂಜಾರಿ ಬೊಳ್ಳಾಡಿ, ಅಬ್ದುಲ್ ಲತೀಫ್ ಎಂಪವರ್, ಹಾರಿಸ್ ಅಡ್ಕ, ಯು.ಕೆ ಇಬ್ರಾಹಿಂ, ಕೆ.ಪಿ ಇಬ್ರಾಹಿಂ ಹಾಜಿ ಉಜಿರೋಡಿ, ಮಾಮು ಉಜಿರೋಡಿ, ಹಂಝಾರ್ ಹಾಜಿ ರೋಯಲ್, ಅಬೂಬಕ್ಕರ್ ರೋಯಲ್, ಇರ್ಷಾದ್ ಹಾಜಿ ರೋಯಲ್ ಸಮೀರ್ ಡಿ.ಕೆ, ಇಬ್ರಾಹಿಂ ಇಡಿಂಜಿಲ, ಕೆ.ಎಂ ಹನೀಫ್ ಮಾಡಾವು, ಇಬ್ರಾಹಿಂ ಹಾಜಿ ಫ್ಯಾಮಿಲಿ, ಲತೀಫ್ ತಿಂಗಳಾಡಿ, ಹಮೀದ್ ಮುಳಿಯತಡ್ಕ, ಇಸ್ಮಾಯಿಲ್ ನಾಟೆಕ್ಕಲ್, ಕೆ.ಪಿ ಉಮ್ಮರ್ ಇಂಜಿನಿಯರ್, ಇಬ್ರಾಹಿಂ ಕೆ.ಪಿ ಉಪಸ್ಥಿತರಿದ್ದರು.
ಮಿಸ್ಬಾಹುಸ್ಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ ಇದರ ಅಧ್ಯಕ್ಷ ಹಕೀಂ ಉಜಿರೋಡಿ, ಕಾರ್ಯದರ್ಶಿ ಹಾರಿಸ್ ಯು.ಕೆ, ಉಪಾಧ್ಯಕ್ಷ ಅಬ್ಬಾಸ್ ಮುಡಾಲ, ಕೋಶಾಧಿಕಾರಿ ಅಬ್ಬಾಸ್ ಉಜಿರೋಡಿ, ಪ್ರಮುಖರಾದ ಖಾಸಿಂ, ಮುನೀರ್, ಶರೀಫ್ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು. ವಿಟ್ಲ ಪೆಲ್ತಡ್ಕ ಖತೀಬ್ ಶಾಕಿರ್ ಸಖಾಫಿ ಉಜಿರೋಡಿ ಸ್ವಾಗತಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.