ಪುತ್ತೂರು: ಎಮ್.ಆರ್.ಪಿ.ಎಲ್ ಸಿಎಸ್ಆರ್ ಅನುದಾನದಿಂದ ದ.ಕ.ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಎರಡು ದಿನ ನಡೆಯುವ ಎಂಡೋ ಪೀಡಿತರಿಗೆ ಕೃತಕ ಕೈಕಾಲು ಜೋಡಣೆ ಶಿಬಿರಕ್ಕೆ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದ ವಠಾರದಲ್ಲಿ ಡಿ.18ರಂದು ಚಾಲನೆ ನೀಡಲಾಯಿತು.
ಎಂಡೋ ಪೀಡಿತರಿಗೆ ಜೈಪುರ್ ಪೂಡ್ಸ್ ಸಂಸ್ಥೆಯಿಂದ ಸ್ಥಳದಲ್ಲೇ ಪರೀಕ್ಷೆ ಮಾಡಿ ಅವರಿಗೆ ಬೇಕಾಗುವ ಕೃತಕ ಕೈ ಕಾಲು ಜೋಡಣೆಯನ್ನು ಸ್ಥಳದಲ್ಲೇ ಮಾಡಿಕೊಡಲಾಯಿತು. ಡಿ.19ರಂದು ಕೂಡಾ ಈ ಶಿಬಿರ ನಡೆಯಲಿದೆ. ಡಿ.20ರಂದು ಬೆಳ್ತಂಗಡಿಯಲ್ಲಿ ಈ ಶಿಬಿರ ನಡೆಯಲಿದೆ ಎಂದು ಎಂದು ಎಂ.ಆರ್.ಪಿ.ಎಲ್ನ ಕಾರ್ಯಕ್ರಮದ ಆಯೋಜನ ವಿಭಾಗದ ಮುಖ್ಯಸ್ಥ ಸ್ಟೀವನ್ ಅವರು ಮಾಹಿತಿ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ವಿಶ್ವಾಸ್ ಶೆಣೈ, ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್, ಸಾಜುದ್ದೀನ್ ಉಪಸ್ಥಿತರಿದ್ದರು.