ಪುತ್ತೂರು: ಬಿ. ವಿ ಸೂರ್ಯನಾರಾಯಣ ಅವರ ಕವನ ಸಂಕಲನ ’ಪದ ಪಲ್ಲವಿ’ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.
ಸಾಹಿತಿ ಡಾ.ನರೇಂದ್ರ ರೈ ದೇರ್ಲ ಅವರು ಕೃತಿ ಲೋಕಾರ್ಪಣೆ ಮಾಡಿದರು. ಡಾ ರಾಜೇಶ್ ಬೆಜ್ಜಂಗಳ ಕೃತಿಯ ಕುರಿತು ಮಾತನಾಡಿದರು. ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ. ವಿಜಯ ಹಾರ್ವಿನ್ ಅವರು ಅಧ್ಯಕ್ಷತೆ ವಹಿಸಿದ್ದರು. ಸುನಿತಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ವಿ ಬಿ ಸೂರ್ಯನಾರಾಯಣ ಅವರ ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಡಾ.ಪವಿತ್ರ ರೂಪೇಶ್, ಅಪರ್ಣ ನಿಟಿಲಾಪುರ, ರಾಮ ಹೆಬ್ಬಾರ್, ಪ್ರೊ. ದತ್ತಾತ್ರೇಯ ರಾವ್, ಚೈತ್ರಿಕ ಕೋಡಿಬೈಲು ಅವರು ಹಾಡಿದರು.