ಪುತ್ತೂರು:ಬಲ್ನಾಡು ಗ್ರಾಮದ ಸಾಜ ಸ.ಹಿ.ಪ್ರಾ ಶಾಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸುಧಾಕರ ನಾಯಕ್ ಹಸಂತಡ್ಕ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಮಲಚರಣ್ ಕೆ.ಎಸ್. ಆಯ್ಕೆಯಾಗಿದ್ದಾರೆ.
ಡಿ.16ರಂದು ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಇಲಾಖಾ ನಿಯಮಾನುಸಾರ ಎಸ್‌ಡಿಎಂಸಿಗೆ 18 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸದಸ್ಯರಾಗಿ, ಭಾಸ್ಕರ ಕೂಟೇಲು, ಕೃಷ್ಣಪ್ಪ ಕೂಟೇಲು, ಸುಂದರ ಮುರುಂಗಿ, ರಂಜಿತಾ ಕೂಟೇಲು, ಚಂದ್ರಾವತಿ ಕೂಟೇಲು, ಪೂರ್ಣಿಮಾ ಕೊಪ್ಪಳ, ಶಶಿಕಲಾ ಮುರುಂಗಿ, ಅಣ್ಣು ನಾಯ್ಕ ಮುರುಂಗಿ, ಅನುರಾಧ ನಾಯ್ಕ ಸರಳಿಕಾನ, ವೀಣಾ ಮುರುಂಗಿ, ಮಂಜುಳಾ ಹಸಂತಡ್ಕ, ಅನುರಾಧ ಕಾನುಮೂಲೆ, ಮೈಮುನಾ ಜಿ, ಕವಿತಾ ಸರಳಿಕಾನ, ಮಂಜುಳಾ ಸಾಜ, ಲೀಲಾವತಿ ಗುಮ್ಮಟಗದ್ದೆ ಆಯ್ಕೆಯಾದರು. ನಂತರ ನಡೆದ ಸದಸ್ಯರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಸಲಾಯಿತು.
ಬಲ್ನಾಡು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿಯವರ ಅಧ್ಯಕ್ಷತೆಯಲ್ಲಿ, ಮುಖ್ಯಶಿಕ್ಷಕ ಶಶಿಕಾಂತ್ ಸಿ . ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಗ್ರಾ.ಪಂ ಉಪಾಧ್ಯಕ್ಷ ರವಿಚಂದ್ರ ಸಾಜ, ಸದಸ್ಯರಾದ ಶೋಭಾ ಮುರುಂಗಿ, ವಸಂತಿ ಸಾಜ, ಮತ್ತು ಟೌನ್ ಬ್ಯಾಂಕ್ ನಿರ್ದೇಶಕರಾದ ಕಿರಣ್ ರೈ ಕಬ್ಬಿನಹಿತ್ಲು ಉಪಸ್ಥಿತರಿದ್ದರು. ಶಿಕ್ಷಕರಾದ ಕೃಷ್ಣಪ್ಪ ಕೆ ನಿರೂಪಿಸಿ, ಕವಿತಾ ಸ್ವಾಗತಿಸಿ, ವಂದಿಸಿದರು.