ಪುತ್ತೂರು: ಎಸ್.ಡಿ.ಎಂ ಲಾ ಕಾಲೇಜು ಮಂಗಳೂರು ಇದರ ಸುವರ್ಣ ಪಥ ಸಂಭ್ರಮದ ಕಾರ್ಯಕ್ರಮಕ್ಕಾಗಿ ಶಾಂತಾ ಕುಂಟಿನಿ ಇವರು ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ.
ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದ ಉಪಸ್ಥಿತಿಯೊಂದಿಗೆ ಎಸ್.ಡಿ.ಎಂ ಲಾ ಕಾಲೇಜು ಇದರ ಪ್ರಿನ್ಸಿಪಾಲ್ ಹಾಗೂ ಶಿಕ್ಷಕ ವೃಂದದವರ ಕೋರಿಕೆಯ ಮೇರೆಗೆ
50ರ ಸುವರ್ಣ ಪಥ ಸಂಭ್ರಮದ ಹಾಡಿನ ಸಾಹಿತ್ಯವನ್ನು ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸುವರ್ಣ ಮಹೋತ್ಸವ ಸಮಾರಂಭದ ದಿನದಂದು ಶಾಂತಾ ಕುಂಟಿನಿ ಇವರಿಗೆ ವೇದಿಕೆಯಲ್ಲಿ ಶಾಲು ಹೊದಿಸಿ ಹೂಗುಚ್ಛ ನೀಡಿ ಸುವರ್ಣ ಪಥ ಸಂಭ್ರಮದ ಫಲಕವನ್ನು ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ ತಾರಾನಾಥ್, ಹೆಸರಾಂತ ವಕೀಲರಾದ ಡಾ. ಮಹೇಶ್ ಕಜೆ, ಎಸ್ ಡಿ ಎಂ ಲಾ ಕಾಲೇಜಿನ ಕಾರ್ಯದರ್ಶಿಗಳಾದ ಸತೀಶ್ಚಂದ್ರ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಉದಯ್ ಮುಳಿಯ, ಪೋಷಕರ ಶಿಕ್ಷಕರ ಸಂಘದ ಪುರುಷೋತ್ತಮ್ ಭಟ್, ವಕೀಲರಾದ ರಾಘವೇಂದ್ರ ರಾವ್, ಸಾಂಸ್ಕೃತಿಕ ಸಂಘದ ಸೌಜನ್ಯ ಹೆಗ್ಡೆ, ವಕೀಲರಾದ ದಿನಕರ್ ಶೆಟ್ಟಿ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಡಾ. ಟಿ.ಶಾಮ ಭಟ್, ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ಹಾಗೂ ಇತರರು ಉಪಸ್ಥಿತರಿದ್ದರು.